ಅಕ್ರಮ ಗೋಸಾಗಟ : ಒಬ್ಬನ ಬಂಧನ ದೂರು

7

ಅಕ್ರಮ ಗೋಸಾಗಟ : ಒಬ್ಬನ ಬಂಧನ ದೂರು

Published:
Updated:

ಸುಬ್ರಹ್ಮಣ್ಯ: ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಾರನ್ನು ಪಂಜದಲ್ಲಿ ಸ್ಥಳೀಯರು ಗುರುವಾರ ತಡೆದಿದ್ದು, ಕಳವು ಆರೋಪದ ಮೇಲೆ ಮರ್ದಾಳದ ನಿವಾಸಿ ಯಾಕೂಬ್‍ನನ್ನು (65) ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

ಯಾಕೂಬ್ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿದ್ದು ‘ ನಾನು ಅಬ್ದುಲ್ ಕರೀಮ್ ಎಂಬವರ ಜತೆ ತೆರಳುತಿದ್ದಾಗ ಪಂಜ ಮುಖ್ಯ ಪೇಟೆ ಬಳಿ 15 ಮಂದಿ ಕಾರನ್ನು ಅಡ್ಡಗಟ್ಟಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದ್ದಾರೆ.

ಪಂಜ ಬಳಿ ರಾತ್ರಿ ಹೊತ್ತು ಸ್ವಿಫ್ಟ್‌ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರನ್ನು ಸಾಗಿಸಲಾಗುತ್ತಿರುವುದನ್ನು ಮನಗಂಡ ಪಂಜ ಪರಿಸರದ ಗ್ರಾಮಸ್ಥರು ಪಂಜದ ಮುಖ್ಯ ಪೇಟೆಯಲ್ಲಿ ಕಾರನ್ನು ಗುರುವಾರ ರಾತ್ರಿ ತಡೆಯೊಡ್ಡಿದ್ದರು. ಈ ವೇಳೆ ಕಾರಿನಲ್ಲಿದ್ದ ಇಬ್ಬರ ಪೈಕಿ ಚಾಲಕ ಅಬ್ದುಲ್ ಕರೀಮ್ ತಪ್ಪಿಸಿ ಪರಾರಿಯಾಗಿದ್ದು, ಕಾರಿನ ಡಿಕ್ಕಿಯಲ್ಲಿ ದನವನ್ನು ಕೈಕಾಲು ಕಟ್ಟಿ ತುಂಬಿಸಿ ಸಾಗಿಸಲಾಗುತ್ತಿತ್ತು. ಜಾನುವಾರನ್ನು ಯೇನೆಕಲ್ಲಿನಿಂದ ಮರ್ದಾಳ ಕಡೆಗೆ ಕೊಂಡೊಯ್ಯಲಾಗುತ್ತಿತ್ತು.  ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಬಂಧು ಕಾರಿನಲ್ಲಿದ್ದ ವ್ಯಕ್ತಿ ಹಾಗೂ ಕಾರನ್ನು ವಶಕ್ಕೆ ಪಡೆಿದ್ದರು.

ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಮರ್ಧಾಳದ ಅಬ್ದುಲ್ ಕರೀಮ್‌( 45) ಇಬ್ರಾಹಿಂ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಯಾಕೂಬ್‍ನನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಯಾಕೂಬ್ ನೀಡಿದ ಹಲ್ಲೆ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಬೇರೆ ಯಾರನ್ನು ಬಂದಿಸಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !