ಮಂಗಳವಾರ, ಅಕ್ಟೋಬರ್ 22, 2019
25 °C

51 ಕೆ.ಜಿ. ಆನೆ ದಂತ ವಶ: ಬಂಧನ

Published:
Updated:
Prajavani

ಉಜಿರೆ:  ಮೂರು ತಿಂಗಳಿಂದ ಆನೆ ದಂತ ವ್ಯಾಪಾರ ನಡೆಸಲು ಬೆಳ್ತಂಗಡಿ ತಾಲ್ಲೂಕಿನಲ್ಲಿ ಹೊಂಚು ಹಾಕುತ್ತಿದ್ದ ಉಜಿರೆ ಸಮೀಪ ಸುರ್ಯ ದೂಜಿರಿಗೆ ಎಂಬಲ್ಲಿ, ಮೂವರು ಆರೋಪಿಗಳ ಸಹಿತ 51 ಕೆ.ಜಿ. ತೂಕದ 10 ಆನೆ ದಂತವನ್ನು ಬುಧವಾರ ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದಿದೆ.

ದೂಜಿರಿಗೆ ನಿವಾಸಿ ಅಬ್ರಾಹಂ ಎಂ.ಎ.(56), ಕೇರಳದ ತೊಳಪ್ಪರಂ ತಾಲೂಕಿನ ಪೊರಕ್ಕಾಡ್ ನಿವಾಸಿ ಸುರೇಶ್ ಬಾಬು (49), ಹಾಸನ ಜಿಲ್ಲೆಯ ಕಚಾಯ ಹೋಬಳಿ ಕಬ್ಬತ್ತಿ ಕ್ರಾಸ್ ರಮೇಶ್ ಕೆ.ಜಿ(31) ಬಂತ ಆರೋಪಿಗಳು. ಮತ್ತೊಬ್ಬ ಆರೋಪಿ ಮಂಗಳೂರಿನ ಅನ್ವರ್  ಪರಾರಿಯಾಗಿದ್ದಾನೆ.

 ಅಬ್ರಾಹಂನ ರಬ್ಬರ್ ತೋಟದ ಶೆಡ್‌ನಲ್ಲಿ ದಂತ ಇರಿಸಲಾಗಿದ್ದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಂಚಾರಿ ಅರಣ್ಯ ದಳ  ದಾಳಿ ನಡೆಸಿತ್ತು. 10 ಆನೆದಂತ , 1 ಡಬಲ್ ಬ್ಯಾರೆಲ್ ರೈಫಲ್ ಹಾಗೂ 8 ಮದ್ದುಗುಂಡು ವಶಪಡಿಸಲಾಗಿದೆ.

ಆರೋಪಿಗಳು ಕೇರಳ ಹಾಗೂ ಸ್ಥಳೀಯವಾಗಿ ಆನೆ ಕೊಂದು ದಂತ ಸಾಗಾಣೆ ನಡೆಸಿದ್ದರು.  ಮಾರಾಟಕ್ಕಾಗಿ ಮೂರು ತಿಂಗಳಿಂದ ಹೊಂಚು ಹಾಕುತ್ತಾ, ಆನೆ ದಂತ ದಾಸ್ತಾನು ಇರಿಸಿದ್ದು ಇಲಾಖೆಗೆ ಮಾಹಿತಿ ಲಭಿಸಿತ್ತು.

ಸಿಐಡಿ ಅರಣ್ಯ ಘಟಕ ಬೆಂಗಳೂರು ಎಡಿಜಿಪಿ ಡಾ. ರವಿಂದ್ರನಾಥನ್, ಸಿಐಡಿ ಅರಣ್ಯ ಘಟಕ ಮಂಗಳೂರು ಎಸ್.ಪಿ. ಸುರೇಶ್ ಬಾಬು, ಮಂಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳ ಪಿಎಸ್ಐ ಪುರುಷೋತ್ತಮ್ ಎ. ಮಾರ್ಗದರ್ಶನದಲ್ಲಿ ಸಿಬ್ಬಂದಿ ಜಗನ್ನಾಥ್ ಶೆಟ್ಟಿ, ಪ್ರವೀಣ್, ಉದಯ್ ನಾಯಕ್, ಮಹೇಶ್ ಟಿ., ದೇವರಾಜ ಎಚ್., ಸುಂದರ ಶೆಟ್ಟಿ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಕಾರಿ ಸುಬ್ಬಯ್ಯ ನಾಯ್ಕ್ ಹಾಗೂ ಸಿಬ್ಬಂದಿ, ಪುತ್ತೂರು ಅರಣ್ಯ ಸಂಚಾರಿ ದಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)