ಬುಧವಾರ, ಅಕ್ಟೋಬರ್ 23, 2019
22 °C

ಪೆರಾರ ದೈವಸ್ಥಾನದ ಬಸವ ತಿವಿದು ಚಾಕರಿ ವ್ಯಕ್ತಿ ಸಾವು

Published:
Updated:
Prajavani

ಬಜ್ಪೆ: ಬಜ್ಪೆಗೆ ಹತ್ತಿರದ ಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಸವ(ಹೋರಿ) ಸಾಕುತ್ತಿದ್ದ ಬಾಲಕೃಷ್ಣ ಶೆಟ್ಟಿ(52) ಎಂಬವರನ್ನು ಶುಕ್ರವಾರ ಸಂಜೆ ಹೋರಿ  ತಿವಿದು ಕೊಂದಿದೆ.

ಪುಣ್ಕೆದಡಿಯ ನಿವಾಸಿ ಪಾಲ್ದೋಡಿ ಮನೆತನದ ಬಾಲಕೃಷ್ಣ ಶೆಟ್ಟಿ ಒಂದು ವರ್ಷದಿಂದ ಆರು ವರ್ಷದ ಬಸವನನ್ನು ನೋಡಿಕೊಳ್ಳುತ್ತಿದ್ದರು. ಶುಕ್ರವಾರ ಸಂಜೆ 4 ಗಂಟೆಗೆ ಮೇಯಲು ಕಟ್ಟಿದ್ದ ಬಸವನನ್ನು ದೈವಸ್ಥಾನದ ಬಳಿ ಇರುವ ಕೊಟ್ಟಿಗೆಯಲ್ಲಿ ಕಟ್ಟಿ ಹುಲ್ಲು ಹಾಕುತ್ತಿದ್ದಾಗ ಒಮ್ಮೆಲೇ ಗಲಿಬಿಲಿಗೊಂಡು, ಅವರ ಮೇಲೆ ಹಾಯ್ದು ತಲೆ ಮತ್ತು ಎದೆಗೆ ಬಲವಾಗಿ ತಿವಿದು ನೆಲಕ್ಕುರುಳಿಸಿ ಗಾಯಗೊಳಿಸಿದೆ.

ಗಂಭೀರ ಗಾಯಗೊಂಡ ಶೆಟ್ಟಿಯವರಿಗೆ ಬಜ್ಪೆ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ಮೃತಪಟ್ಟರು. ಅವರ ಸಂಬಂಧಿ ಯೋಗೀಶ್ ಆಳ್ವ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)