ಸೋಮವಾರ, ಜನವರಿ 18, 2021
22 °C
ಗಾಂಜಾ ಸಾಗಾಟ ಜಾಲ ಪತ್ತೆ: ಇಬ್ಬರ ಬಂಧನ

24 ಕೆ.ಜಿ. ಗಾಂಜಾ ಸಹಿತ 5.73 ಲಕ್ಷ ವೌಲ್ಯದ ಸೊತ್ತು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಗಾಂಜಾ ಸಾಗಾಟ ಜಾಲವನ್ನು ಶುಕ್ರವಾರ ಭೇದಿಸಿರುವ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿ, 5.73 ಲಕ್ಷ ವೌಲ್ಯದ ಸೊತ್ತನ್ನು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ನಿವಾಸಿಗಳಾದ ಇಬ್ರಾಹಿಂ ಮಡನ್ನೂರು, ಅಬ್ದುಲ್ ನಿಜಾದ್ ಬಂಧಿತರು.

ನಗರದ ಪಡೀಲ್ ಜಂಕ್ಷನ್‌ನಿಂದ ಬಿಕರ್ನಕಟ್ಟೆಗೆ ಸಂಚರಿಸುವ ರಸ್ತೆಯಲ್ಲಿ ಪಡುಮರೋಳಿಯ ದೇವಸ್ಥಾನವೊಂದರ ದ್ವಾರ ಬಳಿ  ಕಾರಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ವಾಹನ ತಡೆಗಟ್ಟಿ ಸೊತ್ತು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ₹3.60 ಲಕ್ಷ ವೌಲ್ಯದ 24 ಕೆ.ಜಿ. ಗಾಂಜಾ, ಎರಡು ಲಕ್ಷ ವೌಲ್ಯದ ಟೂರಿಸ್ಟ್ ಕಾರು ಹಾಗೂ ₹13 ಸಾವಿರ ವೌಲ್ಯದ ಮೂರು ಮೊಬೈಲ್‌ಗಳು ವಶಕ್ಕೆ ಪಡೆಯಲಾಗಿದೆ. ಸ್ವಾಧೀನ ಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ವೌಲ್ಯ ₹5.73 ಲಕ್ಷ  ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು