ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಮಂಗಳೂರು: ಹೆಲ್ಮೆಟ್ ಧರಿಸಿ ಬಸ್ ಮೇಲೆ ಕಲ್ಲು ತೂರಾಟ -ಇಬ್ಬರ ಬಂಧನ

Published:
Updated:

ಮಂಗಳೂರು: ನಗರದ ಮೂರು ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಆರೋಪದ ಮೇಲೆ ಇಬ್ಬರನ್ನು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಜೆಪ್ಪು ನಿವಾಸಿ ಮಹೇನ್ ಅಬ್ದುಲ್ ರಹಮಾನ್ (18) ಮತ್ತು ಕುದ್ರೋಳಿ ನಿವಾಸಿ ಅಬ್ದುಲ್ ಮನ್ನಾನ್ (21) ಬಂಧಿತರು.

ಹೆಲ್ಮೆಟ್ ಧರಿಸಿಕೊಂಡು ಬೈಕ್‌ನಲ್ಲಿ ಬಂದು ಕೃತ್ಯ ಎಸಗಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಇದನ್ನೂ ಓದಿ... ‘ಕನಕಪುರದ ಬಂಡೆ’ಗೆ ಈಗ ಸಂಕಷ್ಟದ ಕಾಲ!

ನಗರದ ಬಿಜೈನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಒಂದು ಬಸ್ ಮತ್ತು ಫಳ್ನೀರ್ ಹಾಗೂ ನಂದಿಗುಡ್ಡೆಯಲ್ಲಿ ತಲಾ ಒಂದು ಖಾಸಗಿ ಬಸ್ ಗಳ ಮೇಲೆ ಆರೋಪಿಗಳು ಕಲ್ಲು ತೂರಿದ್ದರು. ಇಬ್ಬರೂ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಬೆಂಬಲಿಗರಾಗಿದ್ದಾರೆ. 

ಶಿವಕುಮಾರ್ ಅವರ ಬಂಧನ ವಿರೋಧಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಇನ್ನಷ್ಟು...

13ರವರೆಗೆ ಡಿ.ಕೆ ಶಿವಕುಮಾರ್‌ ಇ.ಡಿ ವಶಕ್ಕೆ

ದೇಶದ ಕಾನೂನಿಗಿಂತಲೂ ದ್ವೇಷದ ರಾಜಕಾರಣವೇ ಬಲಿಷ್ಠ: ಡಿಕೆಶಿ

Post Comments (+)