ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ | ರಾಷ್ಟ್ರಧ್ವಜ ಕೆಳಗಿಳಿಸುವ ವೇಳೆ ವಿದ್ಯುತ್ ಆಘಾತ: ಪಾದ್ರಿ ಸಾವು

Published 16 ಆಗಸ್ಟ್ 2024, 13:33 IST
Last Updated 16 ಆಗಸ್ಟ್ 2024, 13:33 IST
ಅಕ್ಷರ ಗಾತ್ರ

ಬದಿಯಡ್ಕ: ರಾಷ್ಟ್ರಧ್ವಜವನ್ನು ಕೆಳಗಿಳಿಸುವ ವೇಳೆ ಮುಳ್ಳೇರಿಯ ಚರ್ಚ್‌ನ ಪಾದ್ರಿ ಫಾ.ಮ್ಯಾಥ್ಯೂ ಕುಟಿಲ್ (ಶಿನ್ಸ್ ಆಗಸ್ಟಿನ್) (29) ಅವರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ.

ಅವರ ಜತೆಯಲ್ಲಿದ್ದ ಮುಳ್ಳೇರಿಯ ಬೆಳ್ಳಿಪ್ಪಾಡಿಯ ಸೆಬಿನ್ ಜೋಸೆಫ್ (28) ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಧ್ವಜವು ಹಗ್ಗಕ್ಕೆ ಸಿಲುಕಿದಾಗ, ಧ್ವಜಸ್ತಂಭದ ಕಬ್ಬಿಣದ ಕಂಬವನ್ನು ಕುಟಿಲ್ ಅವರು ಮೇಲೆತ್ತಿದರು. ಕಂಬವು ಭಾರದಿಂದ ವಾಲಿಕೊಂಡು ಸನಿಹದಲ್ಲೇ ಇದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದಾಗಿ ಅವಘಡ ನಡೆದಿದೆ. ಮ್ಯಾಥ್ಯೂ ಕುಟಿಲ್ ಅವರಿಗೆ ತಾಯಿ, ಇಬ್ಬರು ಸಹೋದರರಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT