ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಳಂತಿಮೊಗರು ಉರ್ದು ಶಾಲೆಯಲ್ಲಿ ವಾರ್ಷಿಕ ಸಂಭ್ರಮ 

Last Updated 2 ಜನವರಿ 2023, 4:00 IST
ಅಕ್ಷರ ಗಾತ್ರ

ವಿಟ್ಲ: ಬೊಳಂತಿಮೊಗರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಬೊಳಂತಿಮೊಗರು ವೆಲ್‌ಫೇರ್ ಟ್ರಸ್ಟ್ ವತಿಯಿಂದ ಶಾಲಾ ವಾರ್ಷಿಕ ಸಂಭ್ರಮ ಶನಿವಾರ ನಡೆಯಿತು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, 16 ಮಕ್ಕಳು ಇದ್ದ ಈ ಶಾಲೆಯಲ್ಲಿ ಇಂದು ನೂರರ ಗಡಿ ದಾಟಿದೆ. ಇಲ್ಲಿಯ ಹಳೆ ವಿದ್ಯಾರ್ಥಿಗಳ, ದಾನಿಗಳ ಪರಿಶ್ರಮ ಈ ಸರ್ಕಾರಿ ಅಭಿವೃದ್ಧಿ ಹೊಂದಲು ಕಾರಣವಾಗಿದೆ ಎಂದರು.

ಉದ್ಯಮಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಮಾತನಾಡಿ, ಸರಕಾರಿ ಶಾಲೆಯನ್ನು ಉಳಿಸುವ ಕಾರ್ಯವಾಗಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಪಿ.ಎ. ಎಜ್ಯುಕೇಶನ್ ಟ್ರಸ್ಟ್‌ನ ಡಾ.ಸಯ್ಯದ್ ಅಮೀನ್ ಅಹಮ್ಮದ್, ದುಬೈ ಖಲೀಫಾ ಯೂನಿವರ್ಸಿಟಿ ಪ್ರಾಧ್ಯಾಪಕ ಡಾ.ಅಬ್ದುಲ್ ರಹಿಮಾನ್ ಮತ್ತು ಜೀವಲ್ ಖಾನ್, ಪೌಲ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ ಯಾಸಿನ್ ಬೇಗ್, ಎಸ್‌ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಉಪಾಧ್ಯಕ್ಷ ಉಮ್ಮರ್ ಫಾರೂಕ್, ಸಿ.ಆರ್.ಪಿ ಬಿಂದು ಬಿ.ಜೆ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ವಿ.ಕೆ.ಎಂ. ಅಶ್ರಫ್, ಲತಾ ಅಶೋಕ್, ಡೀಕಯ್ಯ, ಬೊಳಂತಿಮೊಗರು ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ವಿ. ಅಬ್ದುಲ್ ರಹಿಮಾನ್, ಶಾಲಾ ಮುಖ್ಯಶಿಕ್ಷಕ ಉದಯ ವಿ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎ ಮಹಮ್ಮದ್ ಇದ್ದರು.

ಸಹಶಿಕ್ಷಕ ಚಂದ್ರಶೇಖರ ಗೌಡ ಸ್ವಾಗತಿಸಿದರು. ಶಿಕ್ಷಕಿ ಸಕೀನ ವಂದಿಸಿದರು. ಸಿಕಂದರ್ ಖಾನ್ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT