ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಡುಮಲೆಯ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಫೆ.25ರಿಂದ ಮಾರ್ಚ್ 6ರ ತನಕ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲ ಶೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ತಿಳಿಸಿದರು.

ಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಜನವರಿಯಲ್ಲಿ ಜೀರ್ಣೋ ದ್ಧಾರ ಕಾರ್ಯ ಆರಂಭಿಸಲಾಗಿತ್ತು. ₹6 ಕೋಟಿಯಷ್ಟು ವೆಚ್ಚದಲ್ಲಿ ಜೀರ್ಣೋ ದ್ಧಾರ ಕಾರ್ಯಗಳು ನಡೆದಿವೆ. ಕಗ್ಗಲ್ಲು, ಕೆಂಪು ಪಾಲಿಶು ಕಲ್ಲುಗಳಿಂದ ಕಾಷ್ಠಶಿಲ್ಪ ಕೆತ್ತನೆಗಳಿರುವ ಸಾಗುವಾನಿ ಮರದ ಮಾಡಿಗೆ ತಾಮ್ರದ ಹೊದಿಕೆಯಿರುವ ಗರ್ಭಗುಡಿ, ಸಾಗುವಾನಿ ಮರದ ಸುಂದರ ಕಾಷ್ಠ ಕೆತ್ತನೆಗಳುಳ್ಳ ಹಾಗೂ ತಾಮ್ರ ಹೊದಿಕೆಯ ತೀರ್ಥ ಮಂಟಪ, ಸುತ್ತು ಪೌಳಿಯಲ್ಲಿ ಮಹಾಗಣಪತಿ ಗುಡಿ ನಿರ್ಮಾಣಗೊಂಡಿದೆ. ದೇವಳದ ಎದುರು ಭಾಗದಲ್ಲಿ ಎರಡು ಅಂತಸ್ತಿನ ರಾಜಗೋಪುರ, ಸುತ್ತುಪೌಳಿಗೆ ಪಾರಂಪರಿಕ ರೂಪು ನೀಡಲಾಗಿದೆ. ರಾಜಾಂಗಣದಲ್ಲಿ ಶಾಸ್ತಾರ ಗುಡಿ ನಿರ್ಮಿಸಲಾಗಿದೆ ಎಂದರು.

₹2.5 ಕೋಟಿಗೂ ಅಧಿಕ ಮೌಲ್ಯದ ಮರಗಳನ್ನು ಬಳಸಿಕೊಂಡು, ಸುಂದರ ಕೆತ್ತನೆಯೊಂದಿಗೆ ಕ್ಷೇತ್ರಕ್ಕೆ ಭವ್ಯತೆಯ ಸ್ಪರ್ಶ ನೀಡಲಾಗಿದೆ. ನಾಗದೇವರು ಮತ್ತು ನಾಗ ಯಕ್ಷಿಯ ನಾಗನ ಕಟ್ಟೆ ನಿರ್ಮಾಣವೂ ಆಗಿದೆ. ಒಳಾಂಗಣ ಮತ್ತು ಗೋಪುರದ ನೆಲಕ್ಕೆ ಗ್ರಾನೈಟ್ ಹಾಸಲಾಗಿದೆ. ದೇವಳದ ಈಶಾನ್ಯ ದಿಕ್ಕಿನಲ್ಲಿರುವ ತೀರ್ಥ ಬಾವಿಗೆ ಗ್ರಾನೈಟ್ ಅಳವಡಿಸಿ ಹೊಸ ರೂಪ ನೀಡಲಾಗಿದೆ. ಹೊರಾಂಗಣದ ನೈರುತ್ಯ ದಿಕ್ಕಿನಲ್ಲಿ ವಸಂತ ಮಂಟಪ ನಿರ್ಮಿಸಲಾಗಿದೆ. ದಕ್ಷಿಣ ಭಾಗದಲ್ಲಿ ಕಚೇರಿ ಕೊಠಡಿ, ಉತ್ತರದಲ್ಲಿ ಉಗ್ರಾಣ ಕೊಠಡಿ ಅಲ್ಲದೆ ನೈವೇದ್ಯ ಕೊಠಡಿ, ತಂತ್ರಿಗಳ ಕೊಠಡಿ, ಲಾಕರ್ ವ್ಯವಸ್ಥೆಯನ್ನೊಳಗೊಂಡ ಭದ್ರತಾ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿ 1 ಕಿ.ಮೀ. ದೂರದಲ್ಲಿರುವ ಒಂದು ಎಕರೆಯಷ್ಟು ವಿಶಾಲದ ಪವಿತ್ರ ಮದಕವೇ ಈ ಕ್ಷೇತ್ರದ ಮೂಲಸ್ಥಾನವಾಗಿದ್ದು, ಮದಕದ ದಡದಲ್ಲಿ ಶಿಲಾಮಯವಾದ ರಾಜ ರಾಜೇಶ್ವರಿಯ ಗುಡಿ ನಿರ್ಮಿಸಲಾಗಿದೆ. ಪವಿತ್ರ ಬಾವಿ ನಿರ್ಮಾಣ ಮಾಡಲಾಗಿದೆ. ದೇವಳದ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಕ್ಷೇತ್ರ ನಿರ್ಮಾಣಕ್ಕೆ ಬೇಕಾದ ಮರಗಳನ್ನು ಊರಿನ ಭಕ್ತರೇ ದಾನವಾಗಿ ನೀಡಿದ್ದಾರೆ. ಎಲ್ಲಾ ಗುಡಿಗಳ ಮತ್ತು ನಿರ್ಮಾಣಗಳ ಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ. ಕರಸೇವೆಯ ಮೂಲಕ ಸಹಕರಿಸಿದ್ದಾರೆ ಎಂದರು.

ಶಾಸ್ತಾರ ದೇವರ ಹೊಸಬಿಂಬ, ನಾಗ ಬಿಂಬಗಳು, ರಾಜರಾಜೇಶ್ವರಿಯ ದರ್ಪನ ಬಿಂಬಗಳನ್ನು ಜಲಾಧಿವಾಸ ದಲ್ಲಿಡಲಾಗಿದ್ದು, ಮಾರ್ಚ್ 2ರಂದು ಪ್ರತಿಷ್ಠಾ ಕಾರ್ಯಗಳು ನಡೆಯಲಿದೆ. ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.