ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿ ಆಸುಪಾಸಿನ ಆರು ಜಿಲ್ಲೆಗಳಲ್ಲಿ ಆದಿ ದ್ರಾವಿಡ ಜಾತಿ ಯಡಿ ಗುರುತಿಸಿಕೊಂಡಿರುವ ಮುಂಡಾಲ, ಹೊಲೆಯ, ಮುಗೇರ, ಅಸಲ, ಕಲ್ಲಾದಿ ಆದಿ ಕರ್ನಾ ಟಕ ಜಾತಿಯವರನ್ನು ಸತ್ಯ ಸಾರಾಮಾಣಿ ಉಪಜಾತಿ ಎಂದು ಪರಿಗಣಿಸುವಂತೆ ಕರ್ನಾಟಕ ಆದಿ ದ್ರಾವಿಡ ಸಮಾಜ ಸೇವಾ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಲಹೆಗಾರ ಅನಿಲ್ ಕುಮಾರ್, ‘ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ನೆಲೆಸಿರುವ ಮುಂಡಾಲ, ಹೊಲೆಯ ಮತ್ತಿತರ ಪರಿಶಿಷ್ಟ ಜಾತಿಗಳ ಜನರು ದಶಕಗಳಿಂದ ಬೇರೆ ಬೇರೆ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆದರೆ ಆದಿ ದ್ರಾವಿಡ ಒಂದು ಜಾತಿಯಲ್ಲ, ಜಾತಿಗಳ ಗುಂಪು ಎಂದು ನ್ಯಾ.ನಾಗಮೋಹನ ದಾಸ್ ಅಭಿಪ್ರಾಯಪಟ್ಟಿದ್ದಾರೆ. ಇದು ಆದಿ ದ್ರಾವಿಡ ಜಾತಿ ಪ್ರಮಾಣಪತ್ರ ಪಡೆಯುವಾಗ ಉಪಜಾತಿಯನ್ನು ನೋಂದಾಯಿಸದವರಲ್ಲಿ ಆತಂಕ ಮೂಡಿಸಿದೆ’ ಎಂದರು.

‘ಇಲ್ಲಿನ ಆದಿ ದ್ರಾವಿಡ ಜಾತಿಯಲ್ಲಿ ಗುರುತಿಸಿಕೊಂಡ ಬಹುತೇಕರು ಕಾನದ ಕಟದ (ಸತ್ಯ ಸಾರಾಮಾಣಿ) ದೈವದ ಆರಾಧಕರು. ಹಾಗಾಗಿ ನಮಗೆ ಸತ್ಯ ಸಾರಾಮಾಣಿ ಎಂಬ ಉಪಜಾತಿಯಡಿ ಗುರುತಿಸಬೇಕು ಎಂದು ಸರ್ಕಾರಕ್ಕೆ ಅನೇಕ ಸಲ ಮನವಿ ಸಲ್ಲಿಸಿದ್ದೇವೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಹೇಳಿದರು.

‘ನಮ್ಮವರಲ್ಲಿ ಶೇ 90ರಷ್ಟು ಕೃಷಿ ಕಾರ್ಮಿಕರು. ನಮ್ಮ ಕುಲ ಕಸುಬು ಕೃಷಿ ಆದ ಕಾರಣಕ್ಕೆ ಒಳ ಮೀಸಲಾತಿ ವಿಚಾರದಲ್ಲಿ ನಮ್ಮನ್ನು ಬಲಗೈ ಗುಂಪಿಗೆ ಸೇರಿಸಲಾಗಿದೆ. ನಾವು ಬಲಗೈ ಗುಂಪಿನ ಜಾತಿಗಳ ಪೈಪೋಟಿ ಎದುರಿಸಲು ಸಾಧ್ಯವಿಲ್ಲ. ಹಾಗಾಗಿ ನಮಗೆ ಪ್ರತ್ಯೇಕವಾಗಿ ಶೇ 2ರಷ್ಟು ಒಳಮೀಸಲಾತಿ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ವಕ್ತಾರ ಪ್ರೇಮನಾಥ ಬಿ.ಬಿ, ಮುಖಂಡರಾದ ಮೋಹನ ನೆಲೆಗುಂಡಿ, ಶಿವರಾಜ್ ಪಿ.ಪಿ, ಸೂರಜ್ ಬಲ್ಲಾಳ್ಬಾಗ್, ಎ.ಕೆ.ವಿಜಯ ಕೋಕಿಲ ಮೊದಲಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260306-126-183411441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.