ಉಳ್ಳಾಲ: ಜಿಲ್ಲೆಯ ಆಟೊ ರಿಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏ.13ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆಟೋ ರಾಜಾಕನ್ಮಾರ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ.ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಏಕರೂಪದ ಸಂಚಾರ ಪರವಾನಗಿ ಹಾಗೂ ದರ ಪರಿಷ್ಕರಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಒಂದು ಜಿಲ್ಲೆ-ಒಂದು ಪರವಾನಗಿ ಜಾರಿಗೊಳಿಸಿ ಜಿಲ್ಲೆಯಾ ದ್ಯಂತ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದರು.

ಗ್ರಾಮಾಂತರ ಭಾಗದ ನಮ್ಮ ಮನೆಯವರನ್ನು ನಮ್ಮ ಆಟೊದಲ್ಲಿ ಕರೆದುಕೊಂಡು ಹೋದರೆ ಅಥವಾ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ರೋಗಿ ಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರು ಆಟೊ ತಡೆ ಹಿಡಿದು ₹ 10 ಸಾವಿರ ದಂಡ ವಿಧಿಸುವುದು ನ್ಯಾಯಸಮ್ಮತವೇ? ಎಂದು ಪ್ರಶ್ನಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೂ ಮನವಿ ಸಲ್ಲಿಸಿದ್ದೇವೆ. ಗ್ಯಾಸ್ ಭರ್ತಿ ಮಾಡುವ ವಿಚಾರದಲ್ಲಿಯೂ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಗ್ಯಾಸ್ ಪಂಪ್ಗಳಲ್ಲಿ ಗ್ಯಾಸ್ ಇದ್ದರೂ ಕೆಲವು ಆಟೊಗಳಿಗೆ ನೀಡಲಾಗುತ್ತಿಲ್ಲ ಎಂಬ ಆರೋಪ ಇದೆ. ಪಂಪ್ ಮಾಲೀಕರು ತೊಂದರೆ ನೀಡಬಾರದು ಎಂದರು.

ಆಟೊ ರಾಜಾಕನ್ಸಾರ್ ಯೂನಿ ಯನ್ ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್ ಮಾತನಾಡಿದರು. ಹೋರಾಟ ಸಮಿತಿ ಸಂಚಾಲಕ ಸಿದ್ದೀಕ್ ಕೊಡಕ್ಕಲ್, ಕರಾವಳಿ ಆಟೊ ಪಾರ್ಕ್ ಮುಡಿಪು ಅಧ್ಯಕ್ಷ ಹರೀಶ್ ಗಿಂಡೆಪೇರ್, ಆಟೊ ರಾಜಾಕನ್ಸಾರ್ ಯೂನಿಯನ್ ಉಪಾಧ್ಯಕ್ಷ ಮನ್ಸೂರ್ ಮಲಾರ್, ಜತೆ ಕಾರ್ಯದರ್ಶಿ ಶಖಕ್ ಸಾಲೆತ್ತೂರು, ಸದಸ್ಯರಾದ ಶರೀಫ್ ಮಂಚಿ, ನಿಸಾರ್ ದೇರಳಕಟ್ಟೆ ತಹೀನ್ ತೊಕ್ಕೊಟ್ಟು, ಇಮ್ರಾನ್ ಉಳ್ಳಾಲ, ರಿಜ್ವಾನ್ ಕಣಚೂರ್ ಹಾಗೂ ಉಸ್ಮಾನ್ ಸಜಿಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-29-356711061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.