ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬೆ: ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

Last Updated 27 ನವೆಂಬರ್ 2022, 3:02 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ತುಂಬೆ ಸಮೀಪದ ಕುಚ್ಚಿಗುಡ್ಡೆ ಎಂಬಲ್ಲಿ ಸೇವಾ ಜಾಗರಣ ಮತ್ತಿತರ ಸಂಘಟನೆಗಳ ಸಹಕಾರದಲ್ಲಿ ನಿರ್ಮಾಣಗೊಂಡ ಮನೆ ಹಸ್ತಾಂತರ ಶನಿವಾರ ನಡೆಯಿತು.

ಇಲ್ಲಿನ ನಿವಾಸಿ ಕಿರಣ್ ಕುಮಾರ್ ಮತ್ತು ಪ್ರಿಯಾ ದಂಪತಿಗೆ ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಮನೆ ಕೀಲಿ ಹಸ್ತಾಂತರಿಸಿದರು.

ಇದೇ ವೇಳೆ ಗಣಹೋಮ ಮತ್ತು ಸತ್ಯನಾರಾಯಣ ಪೂಜೆ ಸಹಿತ ಗೃಹಪ್ರವೇಶ ನೆರವೇರಿತು. ಆರ್‌ಎಸ್ಎಸ್ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಪ್ರಮುಖರಾದ ತೇವು ತಾರಾನಾಥ ಕೊಟ್ಟಾರಿ, ಗಣೇಶ್ ಸುವರ್ಣ ತುಂಬೆ, ದಾಮೋದರ ನೆತ್ತರಕೆರೆ, ಜಿಲ್ಲಾ ಸಂಚಾಲಕ ಜಗದೀಶ್ ನೆತ್ತರಕೆರೆ, ಬಂಟ್ವಾಳ ಘಟಕ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಆಶೀರ್ವಾದ ಸೇವಾ ಸಂಘದ ಮಹಿಳಾ ಸಮಿತಿ ಅಧ್ಯಕ್ಷೆ ಲಕ್ಷ್ಮಿ, ವಿಜಯ ಕಜಕಂಡ ಇದ್ದರು.

ಇದೇ ವೇಳೆ ದಾನಿ ಪುರುಷೋತ್ತಮ ಕೊಟ್ಟಾರಿ, ಉಮೇಶ್ ಕನಪಾಡಿ, ಸೋಮಶೇಖರ್ ಪರ್ಲಕೆ, ರವಿರಾಜ್ ರಾಮಲಕಟ್ಟೆ, ವಿಜಯ್, ಯೋಗೀಶ್ ಇವರನ್ನು ಸನ್ಮಾನಿಸಲಾಯಿತು.

ಜಗದೀಶ್ ಕಡೆಗೋಳಿ ಸ್ವಾಗತಿಸಿದರು. ಸಂತೋಷ್ ತುಂಬೆ ಮತ್ತು ಸುಶಾನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT