ಬೆಳ್ತಂಗಡಿ: ತಾಲ್ಲೂಕಿನ ತಣ್ಣೀರುಪಂಥ ಗ್ರಾಮದ ದೇವಿನಗರ ಮಹಮ್ಮಾಯಿ ಅಮ್ಮನವರ ಹಾಗೂ ಸ್ಥಳ ಸಾನ್ನಿಧ್ಯ ಪರಿವಾರ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ ಮಡಂತ್ಯಾರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಫೆ.22ರಿಂದ ಫೆ.24ರವರೆಗೆ ನಡೆಯಲಿದೆ ಎಂದು ಪ್ರತಿಷ್ಠೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಮನರಂಜನಾ ಕಾರ್ಯಕ್ರಮ, ಆಹಾರ ದಾಸೋಹ ನಡೆಯಲಿದೆ. ಅಂದಾಜು ₹ 35 ರಿಂದ ₹ 40 ಲಕ್ಷ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿಯ ನಿರ್ಮಾಣ, ಬೈರವ ದೇವರ ಗುಡಿ ನಿರ್ಮಾಣ, ಪರಿವಾರ ದೈವಗಳ ಅಶ್ವತ್ಥವೃಕ್ಷದ ಕಟ್ಟೆ, ನಾಗದೇವರ ಕಟ್ಟೆ ಹಾಗೂ ಸುತ್ತು ಪೌಳಿ ನಿರ್ಮಾಣ ಕೆಲಸಗಳು ನಡೆದಿವೆ. ಗ್ರಾಮೀಣ ಭಾಗದಲ್ಲಿ ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣವಾಗುವ ರೀತಿಯಲ್ಲಿ ದೇವಸ್ಥಾನ ನಿರ್ಮಾಣವಾಗಿದೆ ಎಂದರು.

ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಅರ್ಜೀವಂ ಮಾತನಾಡಿ, ‘1970-80ರ ದಶಕದಲ್ಲಿ ಮರಾಠಿ ಪಂಗಡಕ್ಕೆ ಸೇರಿದ ಜನಾಂಗವು ಗುಮ್ಮಟೆ ಪೂಜೆಯ ಮೂಲಕ ಗ್ರಾಮದ ಹಾಗೂ ನೆರೆ ಗ್ರಾಮದ ಮನೆಮನೆಗಳಿಗೆ ಭೇಟಿಕೊಟ್ಟು ಗುಮ್ಮಟೆ ನೃತ್ಯದೊಂದಿಗೆ ಮಹಾಮ್ಮಾಯಿ ಮತ್ತು ಭೈರವ ದೇವರ ಸೇವೆಯನ್ನು ಮಾಡುತ್ತಿದ್ದರು. 1994ರಲ್ಲಿ ಮಂದಿರ ನಿರ್ಮಿಸಿ ಪ್ರತಿ ಶುಕ್ರವಾರ ಭಜನಾ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು. 2002ರಲ್ಲಿ ಮಹಾಮ್ಮಾಯಿ ಮಂದಿರವನ್ನೇ ದೇವಸ್ಥಾನವಾಗಿ ಪರಿವರ್ತಿಸಿ ನಿತ್ಯಪೂಜೆ, ವಾರದ ಭಜನೆ, ಅನ್ನದಾನ ಸಹಿತ ಸಂಕ್ರಾಂತಿ ಪೂಜೆ, ಸಂಕಷ್ಟಹರ ಪೂಜೆ ನವರಾತ್ರಿ ಪೂಜೆ, ಧನು ಪೂಜೆ, ವಾರ್ಷಿಕ ಜಾತ್ರೋತ್ಸವವು ನಡೆಸಿಕೊಂಡು ಬರಲಾಗಿದೆ’ ಎಂದರು.

ಪ್ರತಿಷ್ಠಾ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ ಮಾತನಾಡಿ, ‘ಫೆ. 22ರಂದು ಬೆಳಿಗ್ಗೆ 8.30 ಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಹೊರೆಕಾಣಿಕೆ ಮೆರವಣಿಗೆಯನ್ನು ಕಲ್ಲೇರಿ ಮಹಾಧ್ವಾರದ ಬಳಿ ಉದ್ಯಮಿ ಧನ್ಯಕುಮಾರ್ ರೈ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9ಕ್ಕೆ ಉದ್ಯಮಿ ಶಿವಶಂಕರ್ ನಾಯಕ್ ಉಗ್ರಾಣ ಮುಹೂರ್ತವನ್ನು, 9.30 ಕ್ಕೆ ಬಿ.ನಿರಂಜನ್ ಬಾವಂತಬೆಟ್ಟು ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ ಎಂದರು.

ಬೆಳಿಗ್ಗೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭರತ್ ಶೆಟ್ಟಿ ಕೇರಿ, ಬಳ್ಳಮಂಜ ದೇವಾಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ ಮೊದಲಾದವರು ಭಾಗವಹಿಸುವರು. ರಾತ್ರಿ 7.30 ರಿಂದ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನಾತನ ನಾಟ್ಯಾಲಯದಿಂದ ರಾಷ್ಟ್ರ ಧರ್ಮ ಜಾಗೃತಿ ‘ಪುಣ್ಯಭೂಮಿ ಭಾರತ ನೃತ್ಯ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಫೆ.23ರಂದು ಬೆಳಿಗ್ಗೆ 7ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಲಿದ್ದು, ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಉಜಿರೆ ಜನಾರ್ದನ ದೇಗುಲದ ಶರತ್ ಕೃಷ್ಣ ಪಡ್ವೆಟ್ನಾಯ, ಅಳದಂಗಡಿ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ತಾಲ್ಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ರಿಂದ ಕಾಟಿಪಳ್ಳ, ಬಾಳ ಮಹಿಳಾ ಯಕ್ಷಗಾನ ಸಂಘದಿಂದ ಶ್ರೀ ದೇವಿ ಮಹಿಷಮರ್ದಿನಿ ಯಕ್ಷಗಾನ ನಡೆಯಲಿದೆ.

ಫೆ.24ರಂದು ಬೆಳಿಗ್ಗೆ ಗಂಟೆ 7ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಮ್ಮಾಯಿ ದೇವಿ, ಕಾಲಭೈರವ ದೇವರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಸಂಜೆ ಗಂಟೆ 6ರಿಂದ ಗೋಂದೊಳು ಪೂಜೆ, ಶ್ರೀದೇವಿಯ ಗದ್ದುಗೆ ಪೂಜೆ, ಕಾಲಭೈರವ ದೇವರ ಗದ್ದುಗೆ ಪೂಜೆ ನಡೆಯಲಿದೆ. ರಾತ್ರಿ 7ಕ್ಕೆ ಭೈರವ ದೇವರಿಗೆ ಬಿಂದು ಸಮರ್ಪಣೆ, 8ರಿ೦ದ ಭಜನಾ ಕಾರ್ಯಕ್ರಮ, 10ರಿಂದ ಗುಮ್ಮಟೆ ನೃತ್ಯ, ದೇವಿಯ ಪಾತ್ರಿಯಿಂದ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ. 25ರಂದು ಶನಿವಾರ ಬೆಳಿಗ್ಗೆ ಕ್ಷೇತ್ರದ ಸ್ಥಳ ಶುದ್ಧಿ ಹಾಗೂ ವಿಶೇಷ ಪೂಜೆ ನಡೆಯಲಿದೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ನಾರ್ಯ, ಪ್ರತಿಷ್ಠಾ ಮಹೋತ್ಸವ ಪ್ರಧಾನ ಕಾರ್ಯದರ್ಶಿ ಸುರೇಶ್ ಎಚ್.ಎಲ್. ಹಲೇಜಿ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ವಿಶ್ವನಾಥ ನಾಯ್ಕ ಕಿನ್ನಿಕೊಡಂಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.