ಉಳ್ಳಾಲ: ‘ಕರಾವಳಿಯ ಮೇಲಿರುವ ಭಯವನ್ನು ಹೋಗಲಾಡಿಸಿ ಮೂವತ್ತು ವರ್ಷಗಳ ಹಿಂದಿದ್ದ ಸೌಹಾರ್ದ ವಾತಾವರಣ ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಸಾಯಿ ಫ್ರೆಂಡ್ಸ್ ಅಸೈಗೋಳಿ ಹಮ್ಮಿಕೊಳ್ಳುತ್ತಿರುವ ಸೌಹಾರ್ದ ಕಾರ್ಯಕ್ರಮಗಳು ಶಾಂತಿಯುತ ಸಮಾಜಕ್ಕೆ ಪೂರಕವಾಗಿವೆ’ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ ಹೇಳಿದರು.

ಮಂಜನಾಡಿಯ ನಿವಾಸದಲ್ಲಿ ಸಾಯಿ ಫ್ರೆಂಡ್ಸ್ ಸರ್ಕಲ್ ಅಸೈಗೋಳಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗೆ ಸನ್ಮಾನ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಯಿ ಫ್ರೆಂಡ್ಸ್ನ ಚಟುವಟಿಕೆ ಗಮನಿಸಿದಾಗ ಕರಾವಳಿಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕೋಮು ಸೌಹಾರ್ದ ಮರುಕಳಿಸುತ್ತಿದೆ ಎಂಬ ಭಾವನೆ ಮೂಡುತ್ತದೆ. ಹಿಂದೆ ಉರುಸ್ ಸಂದರ್ಭದಲ್ಲಿಯೂ ಇದೇ ಸಂಘ ದರ್ಗಾಕ್ಕೆ ಹೊರೆಕಾಣಿಕೆ ಸಲ್ಲಿಸಿತ್ತು. ಮಂಗಳೂರು ಎಂದಾಗ ಭಯದ ವಾತಾವರಣವಿದೆ. ಅದನ್ನು ಹೋಗಲಾಡಿಸಿ ಶಾಂತಿ ನೆಲೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೌಕತ್ ಅಲಿ ಮಾತನಾಡಿ, ನಾಲ್ಕು ವರ್ಷಗಳಿಂದ ಸಾಯಿ ಫ್ರೆಂಡ್ಸ್ ಅಸೈಗೋಳಿ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಅಬ್ದುಲ್ ಅಝೀಝ್ ಸಹಕಾರ ನೀಡಿದ್ದಾರೆ ಎಂದರು.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಜೀಝ್ ಪರ್ತಿಪಾಡಿ, ಉದ್ಯಮಿ ಸಿ.ಎಂ.ಫಾರುಕ್, ನಾಟೆಕಲ್ ವರ್ತಕರ ಸಂಘದ ಅಧ್ಯಕ್ಷ ಹನೀಫ್, ಕಾಸಿಂ, ಸಾಯಿ ಫ್ರೆಂಡ್ಸ್ ಅಸೈಗೋಳಿ ಅಧ್ಯಕ್ಷ ಅಶ್ರಫ್ ನಾಟೆಕಲ್, ಗೌರವಾಧ್ಯಕ್ಷ ಸುನಿಲ್ ಪೂಜಾರಿ, ಕಾರ್ಯದರ್ಶಿ ಪ್ರದೀಪ್, ಹರೀಶ್ ಪೂಜಾರಿ, ಶ್ರೀಕಾಂತ್, ಸುನಿಲ್ ಕೋಟೆ, ರವಿಶಂಕರ್, ದೀಪಕ್, ಪ್ರೇಮದಾಸ್, ಪ್ರವೀಣ್ ಭಾಗವಹಿಸಿದ್ದರು. ಪಿಯು ಪರೀಕ್ಷೆಯಲ್ಲಿ ಶೇ 91 ಅಂಕ ಗಳಿಸಿದ ತೊಕ್ಕೊಟ್ಟು ಸೇಂಟ್ ಸೆಬಾಸ್ಟಿಯನ್ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಅಸೈಗೋಳಿ ಮಂಜನಾಡಿ, ಉರುಮಣೆ, ನಾಟೆಕಲ್, ತಿಬ್ಲೆಪದವು, ಅಸೈಗೋಳಿ ಭಾಗದ ಸುಮಾರು 85 ಅರ್ಹ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-29-24801043

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.