ಬಂಟ್ವಾಳ: ತುಳುನಾಡಿನ ವಿಶಿಷ್ಟ ಸಂಪ್ರದಾಯಗಳಲ್ಲಿ ಗುರುತಿಸಿಕೊಂಡ ದೇವಸ್ಥಾನ ಮತ್ತು ದೈವಸ್ಥಾನಗಳ ವಾರ್ಷಿಕ ಜಾತ್ರೆ ವೇಳೆ ನಡೆಸುವ ಕೋಳಿ ಕುಂಟ ಮತ್ತು ಜೂಜು ರಹಿತ ಕೋಳಿ ಅಂಕಗಳಿಗೆ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಹೇಳಿದರು.

ಇಲ್ಲಿನ ವಗ್ಗದಲ್ಲಿ ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬೂಡ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, 'ಅರ್ಥಪೂರ್ಣ ಮತ್ತು ಧಾರ್ಮಿಕ ನಂಟು ಹೊಂದಿರುವ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ನಡೆಯುವ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ' ಎಂದರು.

ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ಸುಮಾರು 25 ಲಕ್ಷಕ್ಕೂ ಮಿಕ್ಕಿ ಮಂದಿ ಕೋಳಿ ಸಾಕಣೆ ಮತ್ತು ಕೋಳಿ ಅಂಕ ವ್ಯಾಪಾರದಿಂದ ಜೀವನ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ತಿಮರೆಗುಡ್ಡೆ ಮಾತನಾಡಿ, ಕುದುರೆ ರೇಸ್, ಕಂಬಳ, ಜಲ್ಲಿಕಟ್ಟು ಸ್ಪರ್ಧೆಗೆ ಪ್ರೋತ್ಸಾಹ ನೀಡುತ್ತಿರುವ ಸರ್ಕಾರ ಜಿಲ್ಲೆಯ ಜನರ ಧಾರ್ಮಿಕ ನಂಬಿಕೆಯ ಕೋಲ, ನೇಮ, ನಾಗಾರಾಧನೆ, ಯಕ್ಷಗಾನ, ಜಾತ್ರೆ, ಅಂಕ, ಆಯನ ಮತ್ತಿತರ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಜನರ ಧಾರ್ಮಿಕ ನಂಬಿಕೆಗೆ ಎಸಗುವ ಅನ್ಯಾಯ' ಎಂದು ದೂರಿದರು.

ಉದ್ಯಮಿ ವೀರೇಂದ್ರ ಬಿ.ಅಮೀನ್, ಪ್ರಮುಖರಾದ ಬಟ್ಯಪ್ಪ ಪೂಜಾರಿ ಬಲ್ನಾಡು, ಆನಂದ ಪೂಜಾರಿ ಕಡಬ, ಗಂಗಾಧರ ಪೂಜಾರಿ ಕಜೆಕಾರು, ಜಯಚಂದ್ರ ಬೊಳ್ಮಾರ್, ಮೋನಪ್ಪ ಪೂಜಾರಿ ಮುಲ್ಕಾಜೆಮಾಡ, ಹರೀಶ ದಾಸ್ ಕಾವಳಕಟ್ಟೆ, ದಿವಾಕರದಾಸ್ ಕಾವಳಕಟ್ಟೆ, ಜಯಪ್ರಸನ್ನ ನಿಡ್ವಾಲ್ ಮತ್ತಿತರರು ಹಾಜರಿದ್ದರು.

ಸಮಿತಿ ರಚನೆ:ಇದೇ ವೇಳೆ ಬಂಟ್ವಾಳ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಗಂಗಾಧರ ಪೂಜಾರಿ ಕಜೆಕಾರು, ಗೌರವಾಧ್ಯಕ್ಷರಾಗಿ ಬಟ್ಯಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ ನರ್ಸ ಕುಮೇರ್, ಉಪಾಧ್ಯಕ್ಷರಾಗಿ ಅಜಿತ್ ವಗ್ಗ, ಚಂದ್ರಶೇಖರ ಪೂಜಾರಿ ಕುಮಂಗಿಲ,ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ದಾಸ್, ಗೌರವ ಸಲಹೆಗಾರರರಾಗಿ ಪ್ರಕಾಶ್ ಪೂಜಾರಿ, ಜಗದೀಶ್ ಪಚ್ಚಾಜೆ, ದಿವಾಕರದಾಸ್ ಆಯ್ಕೆಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-29-599863042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.