ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ: ಗೊಂದಲದಲ್ಲಿ ನಿಶಾಂತ್ ಶೆಟ್ಟಿ ‘ದಾಖಲೆ’

125 ಮೀಟರ್‌ ದೂರವನ್ನು 10.44 ಸೆಕೆಂಡ್‌ನಲ್ಲಿ ಕ್ರಮಿಸಿದ ನಿಶಾಂತ್ ಶೆಟ್ಟಿ
Last Updated 12 ಏಪ್ರಿಲ್ 2022, 5:27 IST
ಅಕ್ಷರ ಗಾತ್ರ

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ವೇಣೂರು–ಪೆರ್ಮುಡದಲ್ಲಿ ಭಾನುವಾರ ನಡೆದ ಸೂರ್ಯ– ಚಂದ್ರ ಜೋಡುಕರೆ ಕಂಬಳದಲ್ಲಿ ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ ಹೊಸ ದಾಖಲೆ ಬರೆದಿದ್ದಾರೆ. ಆದರೆ, ಸೆನ್ಸರ್‌ನಲ್ಲಿ ತಾಂತ್ರಿಕ ದೋಷ ಇದ್ದುದರಿಂದ ಇದನ್ನು ದಾಖಲೆಯೆಂದು ಪರಿಗಣಿಸಬೇಕೋ ಬೇಡವೋ ಎಂಬ ಗೊಂದಲ ನಿರ್ಮಾಣವಾಗಿದೆ.

ಹಗ್ಗ ಹಿರಿಯ ವಿಭಾಗದ ಓಟದಲ್ಲಿ ನಿಶಾಂತ್‌ ಶೆಟ್ಟಿ 125 ಮೀಟರ್‌ ದೂರವನ್ನು 10.44 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್‌ಗೆ ಲೆಕ್ಕ ಹಾಕಿದಾಗ 8.36 ಸೆಕೆಂಡ್‌ ಸಮಯ ತೆಗೆದುಕೊಂಡಂತಾಗುತ್ತದೆ. ಪದವು ಕಾನಡ್ಕ ಫ್ಲೇವಿ ಡಿಸೋಜ ಅವರ ಕೋಣಗಳನ್ನು ನಿಶಾಂತ್ ಓಡಿಸಿದ್ದರು.

2021ರ ಕಕ್ಕೆಪದವು ಸತ್ಯ–ಧರ್ಮ ಜೋಡುಕರೆ ಕಂಬಳದಲ್ಲಿ 100 ಮೀಟರ್‌ ದೂರವನ್ನು ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ 8.78 ಸೆಕೆಂಡ್‌ನಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು.

ತಾಂತ್ರಿಕ ದೋಷ: ‘ಮಳೆಯಿಂದಾಗಿ ಸೆನ್ಸರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಆಗ ನಿಶಾಂತ್‌ ಶೆಟ್ಟಿ ತೆಗೆದುಕೊಂಡ ಅವಧಿ 10.44 ಸೆಕೆಂಡ್‌ ದಾಖಲಾಗಿದೆ. ಇದನ್ನು ದಾಖಲೆಗೆ ಮಾನ್ಯ ಮಾಡಲಾಗುವುದಿಲ್ಲ ಎಂದು ಸ್ಥಳದಲ್ಲೇ ತಿಳಿಸಲಾಗಿತ್ತು’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್‌ ರೋಹಿತ್‌ ಹೆಗ್ಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT