ತಾತ್ಕಾಲಿಕ ವ್ಯವಸ್ಥೆಗೆ ಪ್ರಯತ್ನ: ಮೆಸ್ಕಾಂ
ಆಲಂಕಾರು ಜಂಕ್ಷನ್‌ನಲ್ಲಿ ಮೈನ್ ಲೈನ್ ಇದ್ದು, ಅಲ್ಲಿಂದ ಕೊಯಿಲಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ₹ 2 ಕೋಟಿ ಮಂಜೂರು ಆಗಿದೆ. ಈ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಆರಂಭಿಸಲು ಅದೇಶ ಆಗಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, 4 ತಿಂಗಳ ಒಳಗೆ ತಾತ್ಕಾಲಿಕwವಾಗಿ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೆಸ್ಕಾಂನ ಪುತ್ತೂರು ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ. ತಿಳಿಸಿದರು.