ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆಯ ಅಗರಿಕಜೆ ನಾಗಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನೇಮೋತ್ಸವವು ಭಕ್ತಿ ಸಡಗರದಿಂದ ನೆರವೇರಿತು.

ಬುಧವಾರ ಮಹಾಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ಪೂರ್ವಕ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಕುಕ್ಕೆಶ್ರೀ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಆದಿ ಮೊಗೇರ್ಕಳರು ಗರಡಿ ಇಳಿಯುವುದು, ರಂಗಸ್ಥಳದಲ್ಲಿ ನರ್ತನ ಸೇವೆ ನೆರವೇರಿಸಿದರು. ಸತ್ಯದೇವತೆ ತನ್ನಿಮಾನಿಗ ಗರಡಿ ಇಳಿದು ರಂಗಸ್ಥಳ ಪ್ರವೇಶಿಸಿ ನರ್ತನ ಸೇವೆ ನೆರವೇರಿಸಿತು. ಬಳಿಕ ಆದಿಮೊಗೇರ್ಕಳರು ಮತ್ತು ತನ್ನಿಮಾನಿಗ ದೈವಗಳು ರಂಗಸ್ಥಳದಲ್ಲಿ ನರ್ತನ ಸೇವೆ ನೆರವೇರಿಸಿದರು.

ಗುರುವಾರ ಬೆಳಿಗ್ಗೆ ಕಾರಣಿಕ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಬಳಿಕ ನರ್ತನ ಸೇವೆ ನಡೆಯಿತು. ಭಕ್ತರು ದೈವಕ್ಕೆ ಚಕ್ಕುಲಿ ಹಾರ, ವೀಳ್ಯದೆಲೆಯ ಹಾರ, ಕೇಪುಳ ಹೂವಿನ ಹಾರ, ಸುಗಂಧರಾಜದ ಹಾರ, ಸೇವಂತಿಗೆ ಹಾರ, ಕಾಕಡ ಮಲ್ಲಿಗೆ ಹಾರ, ಮಂಗಳೂರು ಮಲ್ಲಿಗೆ ಹಾರ ಸಮರ್ಪಿಸಿದರು.

ಅಜ್ಜನ ನೇಮೋತ್ಸವವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಭಕ್ತರು ಅಜ್ಜನಿಂದ ಕರಿಗಂಧ ಸ್ವೀಕರಿಸಿದರು. ಅಲ್ಲದೆ, ಅರಿಕೆ, ಹರಿಕೆ, ಕಾಣಿಕೆ ಸಮರ್ಪಣೆ ನೆರವೇರಿಸಿದರು.ಶುಕ್ರವಾರ ಬೆಳಿಗ್ಗೆ ಲೋಕೇಶ್ ಬಿ.ಎನ್. ಮತ್ತು ಮನೆಯವರಿಂದ ಸ್ವಾಮಿ ಕೊರಗಜ್ಜ ದೈವದ ಹರಕೆಯ ನೇಮೋತ್ಸವ ನಡೆಯಿತು.

ನೇಮೋತ್ಸವ ಸಂದರ್ಭ ನೇಮೋತ್ಸವ ಸಮಿತಿ ಅಧ್ಯಕ್ಷ ಮಾಧವ ಡಿ. ದೇವರಗದ್ದೆ ಇದ್ದರು. ನೇಮೋತ್ಸವದ ನಿಮಿತ್ತ ದೈವಸ್ಥಾನವನ್ನು ವಿಶೇಷ ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.