ಬುಧವಾರ, ಮಾರ್ಚ್ 22, 2023
28 °C

ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಡಿಪು: ‘ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಬಲಿಷ್ಠವಾದ ಆರ್ಥಿಕ ವ್ಯವಸ್ಥೆಯನ್ನು ಹೊಂದಿದ್ದು, ಭಾರತದ ಮುಖ್ಯವಾದ ವ್ಯಾಪಾರ ಪಾಲುದಾರ ಸಂಘಟನೆಯಾಗಿದೆ. ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಜಾಗತಿಕ ವ್ಯವಸ್ಥೆಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ’ ಎಂದು ಯುರೋಪಿಯನ್ ಸಂಸತ್ತು ಮಾಜಿ ಸದಸ್ಯ ರಾಬರ್ಟ್ ಇವಾನ್ಸ್ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾಲಯ, ರಾಜ್ಯಶಾಸ್ತ್ರ ವಿಭಾಗ ಮತ್ತು ಯುರೋಪಿಯನ್ ಅಧ್ಯಯನ ಕೇಂದ್ರ, ಮಾಹೆ ಹಾಗೂ ಯುರೋಪಿಯನ್ ಸಂಸತ್ತಿನ ವಿಶ್ರಾಂತ ಸದಸ್ಯರ ಸಂಘದ ಸಹಯೋಗದೊಂದಿಗೆ ಕೊಣಾಜೆ ಮಂಗಳೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸ ಕೊಠಡಿಯಲ್ಲಿ ನಡೆದ ಬ್ರೆಕ್ಸಿಟ್ ನಂತರದ ಜಗತ್ತಿನಲ್ಲಿ ಭಾರತ- ಯುರೋಪಿಯನ್ ಯೂನಿಯನ್ ಸಂಬಂಧಗಳು ಕುರಿತಾದ ವಿಶೇಷ ಉಪನ್ಯಾಸ ನೀಡಿದರು.

ಮಾಹೆ ಯುರೋಪಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ನೀತಾ ಇನಾಂದಾರ್ ಮಾತನಾಡಿ, ಯುರೋಪಿಯನ್ ಒಕ್ಕೂಟವು ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂಘಟನೆಯಾಗಿದ್ದು, ಭಾರತದ ಜೊತೆಗೆ ಸಂಬಂಧ ವೃದ್ಧಿಸಲು ಒಕ್ಕೂಟವು ಒಲವನ್ನು ತೋರಿದೆ. ಈ ನಿಟ್ಟಿನಲ್ಲಿ ಭಾರತವು ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರ ನಡೆದ ನಂತರದಲ್ಲಾಗುತ್ತಿರುವ ಬೆಳವಣಿಗೆ ಮತ್ತು ಸವಾಲುಗಳನ್ನು ಅವಲೋಕಿಸುವುದು ಸೂಕ್ತವೆನಿಸುತ್ತದೆ’ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಯರಾಜ್ ಅಮೀನ್, ಯುರೋಪಿಯನ್ ಒಕ್ಕೂಟವು ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊಂದಿರುವ ಸಂಘಟನೆಯಾಗಿದ್ದು, ರಾಜಕೀಯ ಕ್ಷೇತ್ರಗಳಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.

ವಿಭಾಗದ ಸಹ ಪ್ರಾಧ್ಯಾಪಕ ಡಾ.ದಯಾನಂದ ನಾಯ್ಕ್, ಡಾ.ರಾಜ್ ಪ್ರವೀಣ್ ಸಿ.ಎಂ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಕಿಶೋರಿ ನಾಯಕ್, ಸಮಾಜಶಾಸ್ತ್ರ ವಿಭಾಗದ ಡಾ.ಸಬಿತಾ, ಮಣಿಪಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಭೂಮಿಕಾ ನಿರೂಪಿಸಿದರು, ಪ್ರವೀಣ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು