ಬೆಳ್ತಂಗಡಿ: ‘ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜ ಬೈದ್ಯ ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ. ಕ್ರಾಂತಿಕಾರಿ ರೈತ ನಾಯಕರೂ ಆಗಿದ್ದ ಅವರ ಕ್ರಾಂತಿ, ಹೋರಾಟದ ವಿಚಾರಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಅವರ ವಂಶಸ್ಥರನ್ನು ಒಳಗೊಂಡ ಕ್ರಾಂತಿಕಾರಿ ಮಂಜಯ್ಯ ಬೈದ್ಯ ಸಂಸ್ಮರಣಾ ಸಮಿತಿ ರಚಿಸಿಲಾಗಿದೆ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಂಪತ್ ಬಿ. ಸುವರ್ಣ ತಿಳಿಸಿದರು.

ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1837ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಮರ ಸುಳ್ಯ ದಂಗೆಯ ಮೂಲಕ ತುಳುನಾಡಿನಲ್ಲಿ ಆರಂಭವಾಗಿತ್ತು. ಆಗ 13 ದಿನಗಳ ಕಾಲ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಸ್ವಾತಂತ್ರ್ಯ ದೊರಕಿತ್ತು. ರೈತ ನಾಯಕ ಕ್ರಾಂತಿವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಹೆಗಲೆಣೆಯಾಗಿ ಹೋರಾಟ ಮಾಡಿ ಹುತಾತ್ಮರಾದವರು ಮಂಜ ಬೈದ್ಯರು. 1837ರ ಮೇ 27ರಂದು ಹುತಾತ್ಮರಾದ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ’ ಎಂದರು.

‘ಬ್ರಿಟಿಷ್ ಸರ್ಕಾರದ ಅಂದಿನ ಉಪ್ಪಿನಂಗಡಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯ ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದರು. ಬ್ರಿಟಿಷ್ ಸರ್ಕಾರದ ವಿರುದ್ಧವಿದ್ದ ರೈತ ಹೋರಾಟಗಾರರ ಗುಂಪನ್ನು ಸೇರಿಕೊಂಡು ಮಂಗಳೂರಿನ ಬಾವುಟಗುಡ್ಡದಲ್ಲಿದ್ದ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ಕನ್ನಡಿಗ ಹಾಲೇರಿ ರಾಜವಂಶಸ್ಥದ ಧ್ವಜ ಹಾರಿಸಿದ್ದರು. ಈ ಘಟನೆಯಿಂದಾಗಿಯೇ ಆ ಸ್ಥಳಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ. ನಂತರದ ದಿನಗಳಲ್ಲಿ ಬ್ರಿಟಿಷ್ ಸೈನ್ಯ ಮಂಜ ಬೈದ್ಯರನ್ನು ಬಂಧಿಸಿ 1837 ಮೇ 27ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಿತು. ಜನರಲ್ಲಿ ಭಯ ಹುಟ್ಟಿಸಲು ಮೃತದೇಹವನ್ನು ತಿಂಗಳುಗಟ್ಟಲೆ ಗಲ್ಲುಕಂಬದಿಂದ ಕೆಳಗಿಳಿಸದೆ ರಣಹದ್ದುಗಳು ತಿನ್ನುವಂತೆ ಹಾಗೆಯೇ ಬಿಡುವ ಕ್ರೂರ ಆದೇಶ ನೀಡಿದ್ದರು. ಈ ಭೀಕರ ಮರಣದ ಸಾಕ್ಷಿಯಾದ ಸ್ಥಳವಾಗಿದ್ದರಿಂದ ಈ ಜಾಗಕ್ಕೆ ಭೀಕರ ಮರಣದ ಕಟ್ಟೆ ಬಿಕರ್ನಕಟ್ಟೆ ಎಂಬ ಹೆಸರು ಬಂದಿತು ಎಂದು ಪ್ರತೀತಿಯಿದೆ’ ಎಂದು ಹೇಳಿದರು.

ಸಮಿತಿಯ ಸಲಹೆಗಾರರಾದ ಜಯವಿಕ್ರಮ ಕಲ್ಲಾಪು, ಭುಜಬಲಿ ಧರ್ಮಸ್ಥಳ, ಡಾ.ಹರ್ಷ ಸಂಪಿಗೆತ್ತಾಯ, ಸಂಚಾಲಕರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನಿತ್ಯಾನಂದ ನಾವರ, ವಿಜಯಗೌಡ ವೇಣೂರು, ರಾಘವ ಕಲ್ಮಂಜ, ಉದಯ ಬಂದಾರು, ರಾಮಚಂದ್ರ ಪೂಜಾರಿ, ಮಂಜ ಬೈದ್ಯರ ಕುಟುಂಬಸ್ಥರಾದ ವೆಂಕಪ್ಪ ಪೂಜಾರಿ, ವಸಂತ ಕುಕ್ಕುಜೆ, ಜನಾರ್ದನ ಪೂಜಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-29-1533980985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.