ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಲಾಭಾಂಶ ಈ ಬಾರಿ ಅಂದಾಜು ₹2 ಕೋಟಿಯಷ್ಟು ಕಡಿಮೆಯಾಗಿದೆ. ಹಾಲಿನ ಬೇಡಿಕೆ ಹೆಚ್ಚಿರುವುದರಿಂದ ನೆರೆಯ ಜಿಲ್ಲೆಗಳನ್ನು ಅವಲಂಬಿಸುವುದು ಮುಂದುವರಿದಿದೆ. ಪ್ರತಿದಿನ ಬೇಡಿಕೆಗಿಂತ 1.20 ಲಕ್ಷ ಲೀಟರ್ಗಳಷ್ಟು ಹಾಲು ಕಡಿಮೆ ಉತ್ಪಾದನೆ ಆಗುತ್ತಿದೆ.

‘ಒಕ್ಕೂಟ ಈ ಬಾರಿ ₹1,270 ಕೋಟಿ ಮೊತ್ತದ ವ್ಯವಹಾರ ನಡೆಸಿದ್ದು ಹಿಂದಿನ ಸಾಲಿಗಿಂತ ಶೇಕಡ 8.18ರಷ್ಟು ಅಭಿವೃದ್ಧಿ ಸಾಧಿಸಿದೆ. ಹಾಲು ಶೇಖರಣೆಯಲ್ಲೂ ಪ್ರಗತಿ ಸಾಧಿಸಿದೆ. ಈಗ ಪ್ರತಿದಿನ ಹಾಲು ಶೇಖರಣೆ ಪ್ರಮಾಣ 4.07 ಲಕ್ಷಕ್ಕೆ ತಲುಪಿದ್ದು ಇದು ಕಳೆದ ಸಲಕ್ಕಿಂತ ಶೇ 19ರಷ್ಟು ಹೆಚ್ಚು. ರೈತರಿಗೆ ಪ್ರತಿ ಲೀಟರ್ಗೆ ದಿನವಹಿ ನೀಡುವ ₹1.5 ಸಹಾಯಧನಕ್ಕೆ ಫೆಬ್ರುವರಿ 21ರಿಂದ ಹೆಚ್ಚುವರಿಯಾಗಿ ₹1 ನೀಡಲಾಗುತ್ತಿದ್ದು ಇದು ಮೇ 31ರವರೆಗೆ ಮುಂದುವರಿಯಲಿದೆ. ಲಾಭಾಂಶದ ಮೇಲೆ ಇದು ಪರಿಣಾಮ ಬೀರಿದೆ. ಕಳೆದ ವರ್ಷ ₹12.79 ಕೋಟಿ ಇದ್ದ ಲಾಭದ ಮೊತ್ತ ಈಗ ₹10.61 ಕೋಟಿಗೆ ಇಳಿದಿದೆ’ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಿನಿ ಡೇರಿ ಸ್ಥಾಪನೆ, ಹಾಲು ಕರೆಯುವ ಯಂತ್ರ ಖರೀದಿ, ರಬ್ಬರ್ ಮ್ಯಾಟ್, ವಾಣಿಜ್ಯ ಡೇರಿ ಮತ್ತು ಹಸಿರು ತಾಕು ಸ್ಥಾಪನೆ, ಹೊರರಾಜ್ಯದಿಂದ ರಾಸು ಖರೀದಿ, ಕರು ಸಾಕಣೆ ಮುಂತಾದ ಯೋಜನೆಗಳಿಗಾಗಿ ₹6.64 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ಸಾಲಿನ ಅಭಿವೃದ್ಧಿ ಯೋಜನೆಗಳಿಗಾಗಿ ₹60 ಲಕ್ಷ ತೆಗೆದಿರಿಸಲಾಗಿದೆ ಎಂದರು.

ಒಕ್ಕೂಟದ ವ್ಯಾಪ್ತಿಯಲ್ಲಿ 1,781 ಸಕ್ರಿಯ ಡೀಲರ್ಗಳು ಇದ್ದು ಅವರೂ ಒಳಗೊಂಡಂತೆ ವಿವಿಧ ಮಳಿಗೆಗಳ ಮೂಲಕ ಪ್ರತಿದಿನ ಸರಾಸರಿ 3,87,360 ಲೀಟರ್ ಹಾಲು ಮತ್ತು 81,979 ಕೆ.ಜಿ ಮೊಸರು, 2.8 ಟನ್ ಪನೀರ್, 6.1 ಟನ್ ತುಪ್ಪ, 850 ಕೆಜಿ ಸಿಹಿ ಉತ್ಪನ್ನ, 2 ಸಾವಿರ ಲೀಟರ್ ಸುವಾಸಿತ, 5043 ಲೀ ಮಜ್ಜಿಗೆ, 4250 ಲೀಟರ್ ಲಸ್ಸಿ ಮಾರಾಟ ಆಗುತ್ತಿದೆ. ಇದರಿಂದ ಪ್ರತಿದಿನ ಸರಾಸರಿ ₹3.3 ಕೋಟಿ ವಹಿವಾಟು ನಡೆಯುತ್ತಿದೆ.

ಮಂಗಳೂರಿನ ಕೇಂದ್ರ ಕಚೇರಿ ಆವರಣದಲ್ಲಿ ₹7 ಕೋಟಿ ಹಾಗೂ ಉಡುಪಿ ಡೇರಿಯಲ್ಲಿ ₹4.25 ಕೋಟಿ ವೆಚ್ಚದ ಆಡಳಿತ ಕಚೇರಿಗಳು ಉದ್ಘಾಟನೆಗೆ ಸಜ್ಜಾಗಿವೆ. ಮೆಗಾ ಡೇರಿ ಆರಂಭಿಸುವುದಕ್ಕಾಗಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ ತಜ್ಞರ ಅಭಿಪ್ರಾಯ ಪಡೆದು ಚರ್ಚಿಸಲಾಗುವುದು. ದಿನಂಪ್ರತಿ 5 ಟನ್ ಪನೀರ್ಗೆ ಬೇಡಿಕೆ ಇರುವುದರಿಂದ ಪನೀರ್ ಘಟಕ ಆರಂಭಿಸಲಾಗುವುದು, ನೀರಿನ ಬಾಟ್ಲಿಂಗ್ ಘಟಕ ಆರಂಭಿಸುವ ಯೋಜನೆಯೂ ಇದೆ ಎಂದು ಅವರು ವಿವರಿಸಿದರು.

ವ್ಯವಸ್ಥಾಪಕ ನಿರ್ದೇಶಕ ಡಿ. ವಿವೇಕ್, ವ್ಯವಸ್ಥಾಪಕ ರವಿರಾಜ್ ಉಡುಪ, ನಿರ್ದೇಶಕರಾದ ಸುಚರಿತ ಶೆಟ್ಟಿ, ಚಂದ್ರಶೇಖರ್, ಮಮತಾ ಶೆಟ್ಟಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-29-66133529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.