ಪುತ್ತೂರು: ಪುತ್ತೂರು ಸೀಮೆ ದೇವಳವಾದ ಮಹಾಲಿಂಗೇಶ್ವರ ದೇವಳದಲ್ಲಿ ಶಿವರಾತ್ರಿಯ ಪ್ರಯುಕ್ತ ಶನಿವಾರ ಮಹಾ ರುದ್ರಯಾಗ, ಶತ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ನಡೆಯಿತು.

ಶಿವರಾತ್ರಿಯ ಉಪವಾಸ- ವ್ರತಾಚರಣೆ ಪಾಲನೆ ಮಾಡಿದ ಸಾವಿರಾರು ಭಕ್ತರು ಬೆಳಿಗ್ಗಿನಿಂದಲೇ ದೇವಳಕ್ಕೆ ಭೇಟಿ ನೀಡಿ ಸೇವೆ ಸಲ್ಲಿಸಿ, ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಪುತ್ತೂರಿನ ವೇದ ಸಂವರ್ಧನಾ ಪ್ರತಿಷ್ಠಾನದ ಸಹಯೋಗದಲ್ಲಿ ಬೆಳಿಗ್ಗೆ 8ರಿಂದ ದೇವಳದ ಹೊರ ಭಾಗದಲ್ಲಿ ದೇವರಿಗೆ ಮಹಾರುದ್ರಯಾಗ ನಡೆಯಿತು. 121 ಮಂದಿ ಋತ್ವಿಜರು ಏಕಕಾಲದಲ್ಲಿ ರುದ್ರನಿಗೆ ಪ್ರಿಯವಾದ ರುದ್ರ ಪಠಣ ಮಾಡುವ ಮೂಲಕ ರುದ್ರಯಾಗ ನೆರವೇರಿಸಿದರು. ಇದೇ ವೇಳೆ ಶತರುದ್ರಾಭಿಷೇಕ ಹಾಗೂ ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಿತು. ಭಕ್ತರು ಬಿಲ್ವಾರ್ಚಣೆ ಮಾಡಿ ಪ್ರಾರ್ಥಿಸಿದರು.

ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಹಾಗೂ ವಸಂತ ಕೆದಿಲಾಯ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ದೇವಳದ ಎದುರು ಭಾಗದಲ್ಲಿರುವ ಧ್ಯಾನಮೂರ್ತಿ ಶಿವನ ಮುಂಭಾಗದಲ್ಲಿ ಬೆಳಿಗ್ಗೆ 6.45 ರಿಂದ ಭಜನೆ, ಕುಣಿತ ಭಜನೆ ಕಾರ್ಯಕ್ರಮ ಆರಂಭಗೊಂಡಿದ್ದು, ಭಾನುವಾರ ಸುರ್ಯೋದಯದ ತನಕ ಮುಂದುವರಿಯಲಿದೆ. ದೇವಳದ ಪಂಚಾಕ್ಷರಿ ಮಂಟಪದಲ್ಲಿ ಬೆಳಿಗ್ಗೆ 9ರಿಂದ ಶಿವನ ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ ಸಂಗೀತೋತ್ಸವ, ಸ್ಥಳೀಯ ನೃತ್ಯ ಶಾಲೆಗಳಿಂದ ನೃತ್ಯೋತ್ಸವ, ರಾತ್ರಿ ಹೊರಾಂಗಣದ ಕಂಡನಾಯ್ಕನ ಕಟ್ಟೆಯಲ್ಲಿ ಅಷ್ಟಾವಧಾನ ಸೇವೆ ನಡೆಯಿತು.

ರಾತ್ರಿ ದೇವರ ಬಲಿ ಹೊರಟು ಒಳಾಂಗಣದಲ್ಲಿ ಸಾಂಪ್ರದಾಯಿಕ ಸುತ್ತು ಬಲಿ, ಹೊರಾಂಗಣದಲ್ಲಿ ದೇವರ ಬಲಿ ಉತ್ಸವ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವದ ಬಳಿಕ ದೇವರ ತೆಪ್ಪೋತ್ಸವ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಬಿ. ಐತ್ತಪ್ಪ ನಾಯ್ಕ್, ಶೇಖರ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಡಾ.ಸುಧಾ ಎಸ್. ರಾವ್, ವೀಣಾ ಬಿ.ಕೆ, ರಾಮಚಂದ್ರ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.