ಮಂಗಳೂರು/ ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಶನಿವಾರ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ನಗರದಲ್ಲಿ ದಿನವಿಡೀ ಬಿಸಿಲಿನ ತೀವ್ರತೆ ಹೆಚ್ಚು ಇತ್ತು. ರಾತ್ರಿ ವೇಳೆ ಸುರಿದ ಮಳೆ ತಂಪೆರೆಯಿತು. ಮೂಡುಬಿದಿರೆಯ ಕೆಲವೆಡೆ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಮಳೆಯಾಗಿತ್ತು. ಸುಳ್ಯ ಪಟ್ಟಣದ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆ ಮಳೆಯಾಗಿದೆ

ಕಡಬ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಬಳಿಕ ಬೀಸಿದ ಭಾರಿ ಗಾಳಿ–ಮಳೆಗೆ ಕೃಷಿ, ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿ ಹಾನಿ ಉಂಟಾಗಿದೆ.

ಕಡಬ, ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಮರ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಯಿತು. ಕಡಬ, ಕುಟ್ರುಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಕೊಯಿಲ, ನೆಲ್ಯಾಡಿ, ಸವಣೂರು, ಬೆಳಂದೂರು, ಚಾರ್ವಾಕ, ಕಾಣಿಯೂರು, ದೋಳ್ಪಾಡಿ, ಎಡಮಂಗಲ, ನೂಜಿಬಾಳ್ತಿಲ, ಬಿಳಿನೆಲೆ, ಕೊಂಬಾರಿನಲ್ಲಿ–ಮಳೆಯಾಗಿದೆ.

ಕೊಯಿಲದ ಕೆಮ್ಮಾರ ಬಡಿಲ ನಿವಾಸಿ ಮೋಹನ್ದಾಸ್ ಶೆಟ್ಟಿ ಎಂಬುವರ ಕೋಳಿ ಫಾರ್ಮ್ ಕಟ್ಟಡಕ್ಕೆ ಮರ ಬಿದ್ದು ಚಾವಣಿ ಕುಸಿದಿದೆ. ಮನೆಯ ಪಕ್ಕದ ತೆಂಗಿನ ಮರ ಮುರಿದು ಬಿದ್ದಿದೆ. ಸುಮಾರು 50 ಅಡಿಕೆ ಮರಗಳು ಧರೆಗೆ ಉರುಳಿವೆ.

ಪೆರಾಬೆ ಮೂಲೆತ್ತಮಜಲು ಸರೋಜಿನಿ ಎಂಬುವರ 54 ಅಡಿಕೆ ಮರಗಳು ನಾಶವಾಗಿವೆ. ಚಾರ್ವಾಕ ಗ್ರಾಮದ ಕಂಡಿಗ ದೇವಯ್ಯ ಗೌಡ ಅವರ 20 ಅಡಿಕೆ, ಕುಂಬ್ಲಾಡಿ ಗೌಡ ಮನೆ ಸದಾನಂದ ಗೌಡ ಅವರ 20 ಅಡಿಕೆ ಮರಗಳು, 4 ವಿದ್ಯುತ್ ಕಂಬ, ಶಿವರಾಮ ಗೌಡ ಅವರ 25 ಅಡಿಕೆ ಮರ, ಅಭಿಕಾರ ದಲಾಡಿ ವಸಂತ ಪೂಜಾರಿ ಅವರ 150 ಅಡಿಕೆ ಮರ, ಮೋನಪ್ಪ ಗೌಡ ಗೌಡಮನೆ ಅವರ 25 ಅಡಿಕೆ ಮರ, ಕುಂಬ್ಲಾಡಿ ರುಕ್ಮಯ್ಯ ಗೌಡ ಅವರ 15 ಅಡಿಕೆ ಮರ, ಕಾಣಿಯೂರು ಸಮೀಪದ ಬೈತಡ್ಕ ಕುಶಾಲಪ್ಪ ಗೌಡ ಅವರ 20 ಅಡಿಕೆ ಮರಗಳು ಧರೆಗುರುಳಿವೆ.

ಕಾಣಿಯೂರು ಸಮೀಪದ ಕಟ್ಟತ್ತಾರು ಕುಶಾಲಪ್ಪ ಗೌಡ ಅವರ ಮನೆಯಲ್ಲಿ ಶುಕ್ರವಾರ ಸಂಜೆ ನೇಮೋತ್ಸವಕ್ಕೆ ಹಾಕಿದ್ದ ಶಾಮಿಯಾನ, ಚಪ್ಪರ ಕಿತ್ತು ಹೋಗಿದೆ. ಕಾಣಿಯೂರು ಹಾಗೂ ಚಾರ್ವಾಕ ಗ್ರಾಮದಲ್ಲಿ ವಿದ್ಯುತ್ ಲೈನ್ಗಳಿಗೆ ಮರ ಬಿದ್ದು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ನಾಣಿಲ ಪ್ರದೇಶದಲ್ಲಿ ಒಂದೇ ಕಡೆ 4 ಕಂಬಗಳು ಮುರಿದಿವೆ.

ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಹಲವೆಡೆ ಮರ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು, ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.