ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ 34 ದಿನಗಳ ಕಾಲ ನಡೆಯುವ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಉತ್ಸವಾದಿಗಳ ಪ್ರಕಾರ 1ನೇ ಮಹಾಶಿವರಾತ್ರಿ ಮಖೆಕೂಟ ಉತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮದೊಂದಿಗೆ ಶನಿವಾರ ಬೆಳಿಗ್ಗೆ ಆರಂಭಗೊಂಡಿತು.

ಬೆಳ್ಳಂಬೆಳಿಗ್ಗೆ ದೇವಳದ ಬಳಿ ಜಮಾಯಿಸಿದ ಭಕ್ತರು ನದಿ ಪಾತ್ರದಲ್ಲಿ ಇರುವ ಉದ್ಭವಲಿಂಗಕ್ಕೆ ತಮ್ಮ ಕೈಯಾರೆ ಹಾಲು, ಎಳನೀರು ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಪುನೀತರಾದರು.

ಅಖಂಡ ಭಜನೆ: ನಾಮಸಂಕೀರ್ತನಾ ಬಳಗ ಉಪ್ಪಿನಂಗಡಿ ಇವರಿಂದ ಶನಿವಾರ ಸೂರ್ಯೋದಯದಿಂದ ಅಖಂಡ ಭಜನೆ ಆರಂಭಗೊಂಡಿದ್ದು, ಭಾನುವಾರ ಸೂರ್ಯೋದಯ ತನಕ ನಡೆಯಲಿದೆ.

ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಮಿತಿ ಸದಸ್ಯರಾದ ಜಯಂತ ಪೊರೋಳಿ, ಹರೀಶ್ ಉಪಾಧ್ಯಾಯ, ಹರಿರಾಮಚಂದ್ರ, ಸುನಿಲ್, ಮಹೇಶ್ ಬಜತ್ತೂರು, ರಾಮ ನಾಯ್ಕ್, ಹರಿಣಿ, ಪ್ರೇಮಲತಾ, ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.