ಬೆಳ್ತಂಗಡಿ: ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಅವರ ವಿಶೇಷ ಮುತುವರ್ಜಿಯಿಂದ ಪುತ್ತೂರು, ಬಂಟ್ವಾಳ, ಮೂಡುಬಿದರೆ, ಸುಳ್ಯ, ಮಂಗಳೂರು ಮಾತ್ರವಲ್ಲದೆ ಬಳ್ಳಾರಿ, ಬೆಳಗಾವಿಯಿಂದಲೂ ಹೊರೆಕಾಣಿಕೆ ಬಂದಿತ್ತು. ಗುರುವಾಯನಕೆರೆಯಿಂದ ವೇಣೂರು ದೇವಸ್ಥಾನವರೆಗೆ 100ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ವಾದ್ಯ ಘೋಷದೊಂದಿಗೆ ಸಾಗಿಬಂತು.

ಶನಿವಾರ ಗುರುವಾಯನಕೆರೆ ಶಕ್ತಿನಗರದಿಂದ ಹೊರಟ ತಾಲ್ಲೂಕಿನ ಎಲ್ಲ ಗ್ರಾಮಸ್ಥರ ಹಸಿರು ಹೊರೆಕಾಣಿಕೆಗೆ ಉದ್ಯಮಿ ಮೋಹನ್ ಕುಮಾರ್ ಚಾಲನೆ ನೀಡಿದರು. ಹೊರೆಕಾಣಿಕೆ ಮೆರವಣಿಗೆಯನ್ನು ಗೋಳಿಯಂಗಡಿಯಲ್ಲಿ ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲರು ಸ್ವಾಗತಿಸಿ, ಬರಮಾಡಿಕೊಂಡರು. ವಿದ್ಯುದ್ದೀಪಾಲಂಕಾರದ ಉದ್ಘಾಟನೆಯನ್ನು ಧಾರ್ಮಿಕ ಪರಿಷತ್ತು ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ನೆರವೇರಿಸಿದರು.

ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಯನ್.ಪುರುಷೋತ್ತಮ ರಾವ್, ಬ್ರಹ್ಮಕಲಶೋತ್ಸವದ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಯಜ್ಞನಾರಾಯಣ ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ, ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್, ರಾಜೇಶ್ ಮೂಡುಕೋಡಿ, ನೇಮಯ್ಯ ಕುಲಾಲ್, ಮೀನಾಕ್ಷಿ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಸಂತೋಷ್ ಕುಮಾರ್ ಮುಂಡೂರು, ಆಶಾಲತಾ, ಪ್ರದೀಪ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಯಶವಂತ್ ಎಸ್, ಸಂತೋಷ್ ಕುಮಾರ್ ಕಾಪಿನಡ್ಕ, ವಿಠಲ ಸಿ.ಪೂಜಾರಿ, ಸತೀಶ್ ವೇಣೂರು, ವಿವಿಧ ಸಮಿತಿ ಪದಾಧಿಕಾರಿಗಳು ಇದ್ದರು.

ಬೃಹತ್ ಸಭಾವೇದಿಕೆ: ದೇಗುಲದ ಬಳಿ 25 ಸಾವಿರ ಚದರ ಅಡಿ ವಿಸ್ತೀರ್ಣದ ಸಭಾವೇದಿಕೆ ರಚಿಸಲಾಗಿದ್ದು, 14 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. 3600 ಚದರ ಅಡಿ ವಿಸ್ತೀರ್ಣದ ಸಭಾವೇದಿಕೆ ನಿರ್ಮಿಸಲಾಗಿದ್ದು, ಧಾರ್ಮಿಕ ಸಭೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲಿ ನಡೆಯಲಿದೆ. ಅರಣ್ಯ ಕಚೇರಿ ಬಳಿಯ ವಿದ್ಯುತ್ ದೀಪಾಲಂಕೃತ ಯಕ್ಷ ವೇದಿಕೆಯಲ್ಲಿ ರಾಜ್ಯದ ಪ್ರಸಿದ್ಧ ಯಕ್ಷಗಾನ ಮೇಳದವರಿಂದ ಬಡಗು ಮತ್ತು ತೆಂಕುತಿಟ್ಟಿನ ಯಕ್ಷಗಾನ ಪ್ರತಿದಿನ ರಾತ್ರಿ ಪ್ರದರ್ಶನಗೊಳ್ಳಲಿದೆ.

ಪರ್ಯಾಯ ಮಾರ್ಗ: ಮೂಡುಬಿದಿರೆ– ಬೆಳ್ತಂಗಡಿ ರಾಜ್ಯ ಹೆದ್ದಾರಿ ಸಂಚಾರದಲ್ಲಿ ಸಂಜೆ ವೇಳೆಗೆ ಟ್ರಾಫಿಕ್ ಜಾಮ್ ಉಂಟಾದರೆ ಬದಲಿ ಮಾರ್ಗ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಗುರುವಾಯನಕೆರೆ ಕಡೆಯಿಂದ ಬರುವ ವಾಹನಗಳು ಗೋಳಿಯಂಗಡಿಯಲ್ಲಿ ಎಡಕ್ಕೆ ತಿರುಗಿ ಮಂಗಳತೇರು-ಮುದ್ದಾಡಿ ಮಾರ್ಗವಾಗಿ ಗುಂಡೂರಿ, ಪಡ್ಡ್ಯಾರಬೆಟ್ಟಕ್ಕೆ ತಲುಪಿ ಮೂಡುಬಿದಿರೆ ಹೆದ್ದಾರಿಗೆ ತಲುಪಬಹುದಾಗಿದೆ. ಮೂಡಬಿದಿರೆಯಿಂದ ಗುರುವಾಯನಕೆರೆ ಕಡೆಗೆ ಹೋಗುವವರು ಇದೇ ಮಾರ್ಗವನ್ನು ಅನುಸರಿಸಬಹುದಾಗಿದೆ.

ಪಾರ್ಕಿಂಗ್ ವ್ಯವಸ್ಥೆ: ದೇಗುಲದ ಬಳಿಯ ಕೆನರಾ ಬ್ಯಾಂಕ್ ಹಿಂಬದಿ ವಿವಿಐಪಿ ಹಾಗೂ ಕಲ್ಲುಬಸದಿ ಬಳಿ ವಿಐಪಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಾರಾವಿ, ಅಳದಂಗಡಿ ಕಡೆಯಿಂದ ಬರುವ ಭಕ್ತರಿಗೆ ಅಜಿಲ ಕೆರೆ ಬಳಿಯ 7 ಎಕರೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗುರುವಾಯನಕೆರೆ ಮಾರ್ಗವಾಗಿ ಬರುವ ಭಕ್ತರಿಗೆ ಕುಂಡದಬೆಟ್ಟ ಶಾಲೆ ಮೈದಾನ, ಗೋಳಿಯಂಗಡಿ ಐಟಿಐ ಕ್ರೀಡಾಂಗಣ ಹಾಗೂ ಇಂದಿರಾಗಾಂಧಿ ಕ್ರೀಡಾಂಗಣ ಮತ್ತು ಕಾಂಜರಕಟ್ಟದ ಬಳಿ, ಕತ್ತೋಡಿ ಬಳಿ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರ್ಜೆ, ಸಿದ್ದಕಟ್ಟೆ ಮಾರ್ಗವಾಗಿ ಬರುವ ವಾಹನಗಳಿಗೆ ವೇಣೂರು ವಿದ್ಯೋದಯ ಶಾಲೆ, ಪ್ರೌಢಶಾಲೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವೇಣೂರು ಅರಣ್ಯಾಧಿಕಾರಿ ಕಚೇರಿ ಬಳಿ ಹಾಗೂ ಕಲ್ಲುಸಂಕದ ಬಳಿ ಸಮತಟ್ಟುಗೊಳಿಸಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಬ್ರಹ್ಮಕಲಶೋತ್ಸವದಲ್ಲಿ ಇಂದು: 19ರಂದು ಬೆಳಿಗ್ಗೆ 8.30 ರಿಂದ ಕ್ಷೇತ್ರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. 10ಗಂಟೆಯಿಂದ ಕುಣಿತ ಭಜನೆ, 11ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಸಂಸ್ಕಾರ ಭಾರತ ಲೋಕ ಕಲಾ ವಿಭಾಗದ ಪ್ರಮುಖ್ ದಯಾನಂದ ಕತ್ತಲ್ಸಾರ್ ಅವರು ತುಳುನಾಡಿನ ಆರಾಧನೆ-ಆಚರಣೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಸಂಜೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಲಿದ್ದು, ಕಟೀಲಿನ ಪ್ರಸಾದ್ ಆಸ್ರಣ್ಣರು ಶುಭಾಶಂಸನೆ ಮಾಡುವರು. ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್, ಮಂಜುನಾಥ ಭಂಡಾರಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಇದಕ್ಕೂ ಮೊದಲು ಉಗ್ರಾಣ, ಭಜನ ಕಮ್ಮಟ, ಸಾಂಸ್ಕೃತಿಕ ಕಾರ್ಯಕ್ರಮ, ಕಚೇರಿ, ಅನ್ನಪೂರ್ಣೇಶ್ವರಿ ಭೋಜನ ಮಂಟಪ ಹಾಗೂ ಯಕ್ಷಗಾನ ವೇದಿಕೆಯ ಉದ್ಘಾಟನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ, ಸುಗಮ ಸಂಗೀತ, ತೆಲಿಕೆದ ಗೊಂಚಿಲು ಬಳಿಕ ಹಾಸ್ಯಸಂಜೆ ಜರುಗಲಿದೆ. ಯಕ್ಷವೇದಿಕೆಯಲ್ಲಿ ಸಂಜೆ 7ರಿಂದ ‘ದುಶ್ಯಾಸನ ವಧೆ’ ಯಕ್ಷಗಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.