ಶನಿವಾರ, ಜುಲೈ 24, 2021
28 °C

ದಮಾಮ್‌ನಿಂದ ಬಂದ 169 ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸೌದಿ ಅರೇಬಿಯಾದ ದಮಾಮ್‌ನಿಂದ 169 ಪ್ರಯಾಣಿಕರನ್ನು ಕರೆತಂದ ಗಲ್ಫ್‌ ಆರ್ 7272 ವಿಮಾನವು ಮಂಗಳವಾರ ರಾತ್ರಿ 11.26ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ಸೌದಿ ಅರೇಬಿಯಾದ ಆಲ್ ಮುಜೈನ್ ಕಂಪನಿಯ ಸಿಇಒ ಝಕಾರಿಯಾ ಜೋಕಟ್ಟೆ ವಿಮಾನದ ವ್ಯವಸ್ಥೆ ಮಾಡಿದ್ದು, ಅವರ ಕಂಪನಿಯ ಸಿಬ್ಬಂದಿ ಮತ್ತು ಕುಟುಂಬದವರನ್ನು ಕರೆತರಲಾಗಿತ್ತು. ಸೌದಿಯಿಂದ ಚೆನ್ನೈ, ಅಹ್ಮದಾಬಾದ್‌ ಹಾಗೂ ಮಂಗಳೂರಿಗೆ ಮೂರು ವಿಮಾನಗಳನ್ನು ಕಂಪನಿ ಮೂಲಕ ಕಳುಹಿಸಿ ಕೊಡಲಾಗಿದೆ. ಇನ್ನೆರಡು ವಿಮಾನಗಳು ಜೂನ್ 5 ಮತ್ತು 8ರಂದು ಮಂಗಳೂರಿಗೆ ಬರಲಿವೆ. ಕಂಪನಿಯೇ ಎಲ್ಲರಿಗೂ ಕ್ವಾರಂಟೈನ್‌ ಸೌಲಭ್ಯ ಕಲ್ಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.