ಮಂಗಳವಾರ, ನವೆಂಬರ್ 12, 2019
20 °C

ಧರ್ಮಸ್ಥಳ: ದಶಲಕ್ಷಣ ಪರ್ವ ಆಚರಣೆ

Published:
Updated:
Prajavani

ಉಜಿರೆ: ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಶಲಕ್ಷಣ ಪರ್ವ ಆಚರಿಸಲಾಯಿತು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಉಪನ್ಯಾಸಕ ಮಹಾವೀರ ಜೈನ್ ಧಾರ್ಮಿಕ ಉಪನ್ಯಾಸ ನೀಡಿದರು.

ಅಷ್ಟವಿಧಾರ್ಚನೆ ಪೂಜೆ, ಜಪ, ಧ್ಯಾನ, ಸ್ವಾಧ್ಯಾಯ ಮೊದಲಾದ ಆಧ್ಯಾತ್ಮಿಕ ಉನ್ನತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)