ಗುರುವಾರ , ನವೆಂಬರ್ 21, 2019
21 °C
ಬಟ್ಟೆಗೆ ಇಸ್ತ್ರಿ ಹಾಕುತ್ತಿದ್ದ ವೇಳೆ ನಡೆದ ಘಟನೆ

ವಿದ್ಯುತ್ ಸ್ಪರ್ಶ: ಯುವಕ ಸಾವು

Published:
Updated:
Prajavani

ಪುತ್ತೂರು: ತಾಲ್ಲೂಕಿನ ಕೋಡಿಂಬಾಡಿ ಗ್ರಾಮದ ದರ್ಖಾಸಿನ ಎಲೆಕ್ಟ್ರಿಷಿಯನ್‌ ಗಣೇಶ್ ಗೌಡ ಕೆ.ಎಸ್ (36) ಮನೆಯಲ್ಲಿ ಬಟ್ಟೆಗೆ ಇಸ್ತ್ರಿ ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್‌ನಿಂದ  ಮೃತಪಟ್ಟಿದ್ದಾರೆ.

ಪುರಸಭಾ ಮಾಜಿ ಅಧ್ಯಕ್ಷ ಪೊಲೀಸ್ ವಶಕ್ಕೆ

ಪುತ್ತೂರು: ವಿದ್ಯುತ್ ಲೈನ್‍ಗೆ ತಾಗಿಕೊಂಡಿದ್ದ ಮರದ ಗೆಲ್ಲುಗಳನ್ನು ತೆರವು ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗರಗಸವನ್ನು ತುಂಡರಿಸಿ  ಜೀವಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಪುರಸಭೆಯ ಮಾಜಿ ಅಧ್ಯಕ್ಷ ಗಣೇಶ್ ರಾವ್ ಅವರನ್ನು ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಮೆಸ್ಕಾಂ ಇಲಾಖೆಯ ಪವರ್‌ಮನ್‌, ಶಾಂತಿಗೋಡು ಗ್ರಾಮದ ಆನಡ್ದ ಐತ್ತಪ್ಪ ಈ ಬಗ್ಗೆ ದೂರು ನೀಡಿದ್ದರು. 

ಗಣೇಶ್ ರಾವ್ ಅವರ ಕಂಪೌಂಡ್‍ನ ಬದಿಯಲ್ಲಿದ್ದ ತೆಂಗಿನ ಮರದ ಗರಿಯನ್ನು ಹಾಗೂ ಹಲಸಿನ ಮರದ ಕೊಂಬೆಗಳನ್ನು ಕಡಿದ ವಿಚಾರವಾಗಿ ತಕರಾರು ಎತ್ತಿ ಅವಾಚ್ಯವಾಗಿ ನಿಂದಿಸಿ, ಗರಗಸವನ್ನು ಎಳೆದುಕೊಂಡು ಹಾನಿಮಾಡಿದ್ದಾರೆ.  ಜೀವಬೆದರಿಕೆಯೊಡ್ಡಿರುವುದಾಗಿ ಐತ್ತಪ್ಪ ದೂರಿನಲ್ಲಿ ಆರೋಪಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಗಣೇಶ್ ರಾವ್ ಅವರನ್ನು ವಿಚಾರಣೆಗಾಗಿ ಶನಿವಾರ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)