ಸೋಮವಾರ, ಅಕ್ಟೋಬರ್ 14, 2019
22 °C

ಶ‌ತಾಯುಷಿ ಡಾ. ಸದಾನಂದ ಹೊಸ್ಕೋಟೆ

Published:
Updated:
Prajavani

ಬೈಂದೂರು : 'ಹೊಸ್ಕೋಟೆ ಡಾಕ್ಟರ್‌’ ಎಂದು ಹೆಸರಾಗಿದ್ದ ಕೆರ್ಗಾಲು ಗ್ರಾಮದ ಹೊಸಕೋಟೆಯ ಶತಾಯುಷಿ ವೈದ್ಯ ಡಾ. ಸದಾನಂದ ಜಿ. ಹೊಸ್ಕೋಟೆ (101) ಮುಂಬೈ ತಮ್ಮ ಪುತ್ರನ ಮನೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಉಪ್ಪುಂದದ ಅಂಬಾಗಿಲಿನಲ್ಲಿ ಐವತ್ತು ವರ್ಷಗಳಿಗೂ ಅಧಿಕ ಕಾಲ ವೈದ್ಯರಾಗಿದ್ದ ಅವರು ಎಲ್ಲ ವರ್ಗದ ಜನರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು. ಕ್ರೀಡೆ ಮತ್ತು ನಾಟಕದಲ್ಲಿ ಆಸಕ್ತರಾಗಿದ್ದ ಅವರು ತಮಗಿದ್ದ ಹಾರ್ಮೋನಿಯಂ, ತಬಲಾ ವಾದನ ನೈಪುಣ್ಯದಿಂದಾಗಿ ಶಾಲೆಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದರು.

Post Comments (+)