ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಕ್ಷಣಾ ಇಲಾಖೆಗೆ ಪೂರೈಕೆಯಾಗುವ ಮದ್ಯ ವಿತರಣೆ: ಅಬಕಾರಿ ಅಧಿಕಾರಿಗಳಿಂದ ದಾಳಿ

ಅಬಕಾರಿ ಅಧಿಕಾರಿಗಳಿಂದ ದಾಳಿ– ಮದ್ಯ ವಶ
Published : 1 ಅಕ್ಟೋಬರ್ 2024, 3:00 IST
Last Updated : 1 ಅಕ್ಟೋಬರ್ 2024, 3:00 IST
ಫಾಲೋ ಮಾಡಿ
Comments

ಮಂಗಳೂರು: ರಕ್ಷಣಾ ಇಲಾಖೆಗೆ ಪೂರೈಕೆಯಾಗುವ ಮದ್ಯವನ್ನು, ರಾಷ್ಟ್ರೀಯ ಸಿಬ್ಬಂದಿ ನಿರ್ವಹಣೆ ಸಂಸ್ಥೆ (ಎನ್‌ಐಪಿಎಂ) ನಗರದಲ್ಲಿ ‌ಈಚೆಗೆ ಏರ್ಪಡಿಸಿದ್ದ ‘ನ್ಯಾಟ್‌ ಕಾನ್‌’ ವಿಚಾರ ಸಂಕಿರಣದಲ್ಲಿ ಅಕ್ರಮವಾಗಿ ವಿತರಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿ ನಡೆಸಿ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ರಕ್ಷಣಾ ಇಲಾಖೆಗೆ ಪೂರೈಕೆಯಾಗುವ ವಿವಿಧ ಬ್ರಾಂಡ್‌ಗಳ 39.89 ಲೀ ಮದ್ಯ, 19.14 ಲೀ. ಬಿಯರ್‌ ದಾಳಿಯ ವೇಳೆ ಪತ್ತೆಯಾಗಿದೆ. ಬ್ಲ್ಯಾಕ್‌ಡಾಗ್‌ ಬ್ರ್ಯಾಂಡ್‌ನ 38 ಖಾಲಿ ಬಾಟಲಿಗಳು ಸ್ಥಳದಲ್ಲಿ ಸಿಕ್ಕಿವೆ ಎಂದು ಅಬಕಾರಿ ಇಲಾಖೆಯವರು ತಿಳಿಸಿದ್ದಾರೆ.

‘‌ನ್ಯಾಟ್‌ಕಾನ್‌ ವಿಚಾರ ಸಂಕಿರಣದ ಔತಣಕೂಟಕ್ಕೆ ಸಿಎಲ್‌ 5 (ನಿರ್ದಿಷ್ಟ ಕಾರ್ಯಕ್ರಮಕ್ಕೆ ಮದ್ಯ ಪೂರೈಸುವುದು) ಪರವಾನಗಿ ಪಡೆಯಲಾಗಿತ್ತು. ಈ ಪರವಾನಗಿ ಪಡೆದವರು ಅಬಕಾರಿ ನಿಯಮ ಪ್ರಕಾರ ಬೇರೆ ರಾಜ್ಯದ ಮದ್ಯವನ್ನು ಇಲ್ಲಿಗೆ ತಂದು ಬಳಸುವಂತಿಲ್ಲ. ಆದರೆ ರಕ್ಷಣಾ ಇಲಾಖೆಗೆ ಮಾತ್ರ ಪೂರೈಸುವ ಮದ್ಯವನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿತ್ತು. ಅದನ್ನು ನಾವು ವಶಪಡಿಸಿಕೊಂಡಿದ್ದೇವೆ’ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಕ್ಷಣಾ ಇಲಾಖೆಗೆ ಪೂರೈಸುವ ಮದ್ಯವನ್ನು ಅನ್ಯ ಉದ್ದೇಶಕ್ಕೆ ಬಳಸಿದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಆದಾಯ ನಷ್ಟವಾಗುತ್ತದೆ. ಎನ್‌ಐಪಿಎಂ ಏರ್ಪಡಿಸಿದ್ದ ಕಾರ್ಯಕ್ರಮಕ್ಕಾಗಿ ಸಿಎಲ್‌ 5 ಪರವಾನಗಿ ಪಡೆದ ವ್ಯಕ್ತಿ ವಿರುದ್ಧ ಹಾಗೂ ಮದ್ಯ ವಿತರಿಸುತ್ತಿದ್ದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT