ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದ್, ಫಾಝಿಲ್ ಮತ್ತು ಜಲೀಲ್ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

Published 30 ಮೇ 2023, 13:26 IST
Last Updated 30 ಮೇ 2023, 13:26 IST
ಅಕ್ಷರ ಗಾತ್ರ

ಪುತ್ತೂರು: ‘ಮಸೂದ್, ಫಾಝಿಲ್ ಮತ್ತು ಜಲೀಲ್ ಕೃಷ್ಣಾಪುರ ಹತ್ಯೆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ಧರಾಮಯ್ಯ ಅವರು ನಮ್ಮ ಸರ್ಕಾರ ಆಡಳಿತಕ್ಕೆ ಬಂದಲ್ಲಿ ಈ ಕುಟುಂಬಗಳಿಗೆ ಪರಿಹಾರ ಒದಗಿಸುವ ಮತ್ತು ತನಿಖೆ ನಡೆಸುವ ಭರವಸೆಯನ್ನು ನೀಡಿದ್ದು, ಈಗ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಈ ಭರವಸೆಗಳನ್ನು ಈಡೇರಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಆಗ್ರಹಿಸಿದರು.

ಹತ್ಯೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ₹25 ಲಕ್ಷ ಪರಿಹಾರ ನೀಡಿದೆ. ಆದರೆ, ಪ್ರವೀಣ್ ಹತ್ಯೆಯ ಬೆನ್ನಲ್ಲೇ ಹತ್ಯೆಯಾದ ಮಸೂದ್, ಫಾಜಿಲ್ ಕಾಟಿಪಳ್ಳ ಮತ್ತು ಜಲೀಲ್ ಕೃಷ್ಣಾಪುರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಿದೆ ತಾರತಮ್ಯ ಎಸಗಿದೆ ಎಂದು ಆರೋಪಿಸಿದರು.

ಇನ್ನೊಮ್ಮೆ ನಿಷ್ಠಾವಂತ ಅಧಿಕಾರಿಗಳ ಮೂಲಕ ಪ್ರವೀಣ್ ಹತ್ಯೆಯ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಉಪಾಧ್ಯಕ್ಷ ಇಬ್ರಾಹಿಂ ಸಾಗರ್,  ಕಾರ್ಯದರ್ಶಿ ನೌಶಾದ್ ಬೊಳುವಾರು ಮತ್ತು ಸದಸ್ಯ ಜೈನುದ್ದೀನ್ ವಿಟ್ಲ  ಇದ್ದರು.

ನಮಾಜ್‌ಗೆ ಅಗೌರವ

 ಅರುಣ್ ಪುತ್ತಿಲ ಬ್ರಿಗೇಡ್ ಪಾಣಾಜೆ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಂದೀಪ್ ಪನಿಯನ್ ಎಂಬಾತ ಅಶ್ಲೀಲ ಭಂಗಿಯಲ್ಲಿ ಮುಸ್ಲಿಮರು ನಮಾಜ್ (ಪ್ರಾರ್ಥನೆ) ಮಾಡುತ್ತಿರುವ ವ್ಯಂಗ್ಯ ಚಿತ್ರ ರಚಿಸಿ ಹರಿಯಬಿಟ್ಟು ಅವಹೇಳನ ಮಾಡಿದ್ದಾನೆ. ಮುಸ್ಲಿಮರ ಭಾವನೆಗೆ ಚ್ಯುತಿ ತರುವ ಮತ್ತು ಸಮಾಜದಲ್ಲಿ ಕೋಮು ಭಾವನೆ ಕೆರಳಿಸಲು ಪ್ರಯತ್ನಿಸಿರುವ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಶ್ರಫ್ ಕಲ್ಲೇಗ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT