ದೇರಳಕಟ್ಟೆ:ಕ್ಯಾನ್ಸರ್‌ ಚಿ‌ಕಿತ್ಸೆಗೆ ಹೈಪೆಕ್ ವಿಧಾನ

7
ಫೈನಲ್ ಸ್ಟೇಜ್‍ನಲ್ಲಿರುವ ಕ್ಯಾನ್ಸರ್ ರೋಗಿಗಳ ಪಾಲಿಗೆ ಆಶಾಕಿರಣ

ದೇರಳಕಟ್ಟೆ:ಕ್ಯಾನ್ಸರ್‌ ಚಿ‌ಕಿತ್ಸೆಗೆ ಹೈಪೆಕ್ ವಿಧಾನ

Published:
Updated:
Deccan Herald

ಉಳ್ಳಾಲ:ಹೈಪರ್ ಥರ್ಮಿಕ್ ಇಂಟ್ರಿ ಪೆರಿಟೋನಿಯಲ್ ಕಿಮೋ ಥೆರಫಿ(ಹೈಪೆಕ್) ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನದಿಂದ ಕ್ಯಾನ್ಸರ್ ಮತ್ತೆ ಮರುಕಳಿಸುವುದನ್ನು ಮತ್ತು ಬೇರೆ ಅಂಗಗಳಿಗೆ ಹರಡುವುದನ್ನು ತಪ್ಪಿಸುವಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತಜ್ಞರ ತಂಡ ಯಶಸ್ವಿಯಾಗಿದೆ.

ಹೊಟ್ಟೆಯ ವಿವಿಧ ಭಾಗಗಳಿಗೆ ಹರಡಿ ಅಂತಿಮ ಹಂತದಲ್ಲಿರುವ ಹಾಗೂ ಎಲ್ಲ ಬಗೆಯ ಚಿಕಿತ್ಸೆಯಲ್ಲೂ ವಿಫಲವಾಗಿರುವ ಕ್ಯಾನ್ಸರ್ ರೋಗಿಗಳಿಗೊಂದು ಆಶಾಕಿರಣವಾಗುವ ಮೂಲಕ ನೂತನ ಹೈಪರ್ ಥರ್ಮಿಕ್ ಇಂಟ್ರಿ ಪೆರಿಟೋನಿಯಲ್ ಕಿಮೋ ಥೆರಫಿ(ಹೈಪೆಕ್) ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನ ಕ್ಯಾನ್ಸರ್ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ಪರಿಣಾಮಕಾರಿಯಾಗಿದೆ.

45ವರ್ಷದ ಮಹಿಳೆಯೊಬ್ಬರು ಅಂಡಾಶಯ ಕ್ಯಾನ್ಸರ್‍ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಯ ಮತ್ತು ಕಿಮೋಥೆರಫಿಯ ನಂತರ ಎಂಟು ತಿಂಗಳಲ್ಲಿ ರೋಗ ಮತ್ತೆ ಮರುಕಳಿಸಿ ಹೊಟ್ಟೆಯ ಅನೇಕ ಭಾಗಗಳಿಗೆ ಹರಡಿತ್ತು. ಕ್ಯಾನ್ಸರ್ ಶಸ್ತ್ರಚಿಕಿತ್ಸಾ ಹಾಗೂ ಹೈಪೆಕ್ ತಜ್ಞ ಡಾ. ವಿನಯ ಕುಮಾರ್ ರಾಜೇಂದ್ರ ಅವರ ನೇತೃತ್ವದಲ್ಲಿ ಅರಿವಳಿಕೆ ತಜ್ಞ ಡಾ. ಶ್ರೀಪಾದ ಮೆಹಂದಲ್, ಕ್ಯಾನ್ಸರ್ ತಜ್ಞ ಡಾ. ವಿಜಿತ್ ಶೆಟ್ಟಿ ಸುಮಾರು 15ಗಂಟೆಗಳ  ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಹರಡಿದ ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ತೆಗೆದು ಹೈಪೆಕ್ ವಿಧಾನದಿಂದ ಕಿಮೋಥೆರಫಿ ನೀಡಲಾಗಿದ್ದು ಈ ಚಿಕಿತ್ಸೆಯ ನಂತರ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಈ ನೂತನ ವಿಧಾನವನ್ನು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರೇ ನಿರ್ವಹಿಸಬೇಕಾಗಿದ್ದು ಕಿಮೋಥೆರಫಿಯ ಸಾಂದ್ರತೆ ಮತ್ತು ಉಷ್ಣತೆಯ ಏರುಪೇರಿನಿಂದ ಚಿಕಿತ್ಸೆ ವಿಫಲವಾಗಲು ಮತ್ತು ರೋಗಿಯ ಸಾವಿಗೂ ಕಾರಣವಾಗಬಹುದು. ಕ್ಷೇಮದಲ್ಲಿ ಈ ಚಿಕಿತ್ಸೆಯನ್ನು ಇಟಲಿಯ ಹೈಪೆಕ್ ತಂತ್ರಜ್ಞಾನವನ್ನು ಹಾಗೂ ಅಂತರರಾಷ್ಟ್ರೀಯ ಮಾರ್ಗದರ್ಶನಗಳನ್ನು ಅನುಸರಿಸಿ ಮಾಡಲಾಗಿದೆ.

ಹೈಪೆಕ್ ವಿಧಾನವನ್ನು ಹೊಟ್ಟೆ ಸಂಬಂಧಿ ಹಲವು ಅಂಗಗಳ ಕ್ಯಾನ್ಸರ್‍ಗಳಿಗೆ(ಅಂಡಾಶಯ, ಹೃದಯ, ಅಪೆಂಡಿಕ್ಸ್ , ಕರುಳು) ಬಳಸಬಹುದಾಗಿದೆ. ಖಾಸಗಿ ವಲಯದಲ್ಲಿ ಈ ಚಿಕಿತ್ಸೆ ವೆಚ್ಚ ಸುಮಾರು ₹10ರಿಂದ ₹15ಲಕ್ಷ ವೆಚ್ಚದಷ್ಟು ದುಬಾರಿಯಾಗಿದ್ದು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅತ್ಯಂತ ಮಿತದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗಾಗಿಯೇ ಮೀಸಲಾದ ನುರಿತ ತಜ್ಞ ವೈದ್ಯರು ಇಟಲಿ ಮಿಲಾನ್‍ನ ನ್ಯಾಷನಲ್ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್ ಮತ್ತು ನವದೆಹಲಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ.

ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ. ಪಿ.ಎಸ್. ಪ್ರಕಾಶ್ ನೂತನ ತಂಡದ ಸಾಧನೆಯನ್ನು ಅಭಿನಂದಿಸಿದ್ದಾರೆ. ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ, ಕ್ಷೇಮ ರೇಡಿಯೇಶನ್ ಆಂಕೋಲಾಜಿ ಮುಖ್ಯಸ್ಥ ಡಾ. ಜಯರಾಮ ಶೆಟ್ಟಿ, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹೀರೇಮಠ ಉಪಸ್ಥಿತರಿದ್ದರು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !