ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದಲ್ಲಿ ಸಾಮಾನ್ಯ ದಿನಗಳಲ್ಲಿ ಸರಾಸರಿ 25 ಸಾವಿರ ಮಂದಿ ಹಾಗೂ ಶನಿವಾರ, ಭಾನುವಾರ, ಸೋಮವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ದಿನಕ್ಕೆ ಸರಾಸರಿ 50 ಸಾವಿರ ಜನ ಅನ್ನಪ್ರಸಾದ ಸ್ವೀಕರಿಸುತ್ತಾರೆ.

ಅನ್ನ, ಸಾರು, ಸಾಂಬಾರು, ಪಲ್ಯ, ಪಾಯಸ ಮತ್ತು ಮಜ್ಜಿಗೆಯನ್ನು ಕೊಡಲಾಗುತ್ತದೆ.

‘ಅಡುಗೆ ತಯಾರಿಸಲು ಸ್ಟೀಮ್ (ಉಗಿ) (Steam Cooking System) ಬಳಸಲಾಗುತ್ತದೆ. ದಿನಕ್ಕೆ 300 ಲೀಟರ್ ಡೀಸೆಲ್ ಬಳಸಿ ಸ್ಟೀಮ್ನಿಂದ ಊಟ ತಯಾರಿಸಲಾಗುತ್ತಿದೆ’ ಎಂದು ಅನ್ನಪೂರ್ಣ ಭೋಜನಾಲಯದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚು ಇರುವುದರಿಂದ 500 ಲೀಟರ್ ಡೀಸೆಲ್ ಬೇಕಾಗುತ್ತದೆ.

ವಿದ್ಯುತ್ನಿಂದ ಪಂಪ್ ಬಳಸಿ ಡೀಸೆಲ್ನಿಂದ ಸ್ಟೀಮ್ ಉತ್ಪಾದಿಸಿ ಅಡುಗೆಗೆ ಬಳಸಲಾಗುತ್ತದೆ. 850 ಲೀಟರ್ ಸ್ಟೀಮ್ ಉತ್ಪಾದನೆ ಮಾಡುವ ಮೂರು ಸ್ಟೀಮ್ ಬಾಯ್ಲರ್ಗಳನ್ನು ಉಪಯೋಗಿಸಲಾಗುತ್ತದೆ.

ಪಲ್ಯ ಹಾಗೂ ಮಸಾಲೆ ಪದಾರ್ಥ ಒಗ್ಗರಣೆ ಹಾಕಲು ಮಾತ್ರ ಅಡುಗೆ ಅನಿಲ ಸಿಲಿಂಡರ್ ಬಳಸಲಾಗುತ್ತದೆ. ಇಂಡೇನ್ ಕಮರ್ಷಿಯಲ್ ಅನಿಲ ಸಿಲಿಂಡರ್ ಬಳಸುತ್ತಿದ್ದು ಸದ್ಯಕ್ಕೆ ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.