ಉಜಿರೆ: ಧರ್ಮಸ್ಥಳಕ್ಕೆ ಯಾತ್ರಾರ್ಥಿ ಯಾಗಿ ಬಂದಿದ್ದ ಮಹಿಳೆಗೆ ಅಪರಿಚಿತನೊಬ್ಬ ಮತ್ತು ಬರಿಸುವ ಪಾನೀಯ ಕುಡಿಸಿ ಆಕೆಯಲ್ಲಿದ್ದ ನಗ, ನಗದು ಅಪಹರಿಸಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಬೆಂಗಳೂರಿನ ಜೆ.ಪಿ.ನಗರ ನಿವಾಸಿ ಪ್ರೇಮಾ ಕೆ. (70) ಮೇ 25ರಂದು ಧರ್ಮಸ್ಥಳ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ತೆರಳಲು ರಾತ್ರಿ 9.45ಕ್ಕೆ ಧರ್ಮಸ್ಥಳದ ಮುಖ್ಯಪ್ರವೇಶದ್ವಾರದ ಬಳಿಯ ಕೆಎಸ್ಆರ್ಟಿಸಿ ಬಸ್ ತಂಗುದಾಣದ ಬಳಿ ಬಸ್ಗಾಗಿ ಕಾಯುತ್ತಿದ್ದರು. ಆಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ಪರಿಚಯಿಸಿಕೊಂಡು ಆಕೆಗೆ ಲಡ್ಡುಪ್ರಸಾದ ಮತ್ತು ಬಾಟಲಿಯಿಂದ ಪಾನೀಯ ನೀಡಿದ್ದ. ಅವರು ಸ್ವಲ್ಪ ಪಾನೀಯ ಕುಡಿದಿದ್ದರು. ಬಳಿಕ ರಾತ್ರಿ 10.15ಕ್ಕೆ ಆತ ಪ್ರೇಮಾ ಅವರನ್ನು ಪ್ರವೇಶದ್ವಾರ ಬಳಿ ಇರುವ ಕಟ್ಟೆಗೆ ಕರೆದುಕೊಂಡು ಹೋಗಿ ಕೂರಿಸಿದ್ದ. ಉಪಾಯದಿಂದ ಆಕೆಯ ಬ್ಯಾಗ್ನಲ್ಲಿದ್ದ ಚಿನ್ನಾಭರಣಗಳನ್ನು ಅಪಹರಿಸಿ, ಬಸ್ನಲ್ಲಿ ಸೀಟ್ ಇದೆಯಾ ಎಂದು ನೋಡಿ ಬರುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ.

ಅಸ್ವಸ್ಥರಾದ ಪ್ರೇಮಾ ಅವರನ್ನು ಸ್ಥಳೀಯರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಪರ್ಸ್ನಲ್ಲಿದ್ದ 12 ಗ್ರಾಂನ ಚಿನ್ನದ ಮುತ್ತಿನಹಾರ, 80 ಗ್ರಾಂನ ಮಾಂಗಲ್ಯ ಸರ, 20 ಗ್ರಾಂನ ಚಿನ್ನದ ಕೈಬಳೆ ಮತ್ತು ₹ 7 ಸಾವಿರವನ್ನು ಆತ ಅಪಹರಿಸಿದ್ದಾನೆ ಎಂದು ತಿಳಿದು ಬಂದಿದೆ.

ನಗದು ಸೇರಿದಂತೆ ಸುಮಾರು ₹ 10 ಲಕ್ಷ ಮೌಲ್ಯದ ಆಭರಣ ಕಳವಾಗಿದೆ ಎಂದು ಪ್ರೇಮಾ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-1555586882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.