ಮಂಗಳೂರು: ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ವಿಧಿವಿಜ್ಞಾನ ತಂಡದ ಅಧಿಕಾರಿಗಳ ಜೊತೆಗೆ ಧರ್ಮಸ್ಥಳದ ನೇತ್ರಾವತಿ ನದಿ ಪಕ್ಕದ ಬಂಗ್ಲೆಗುಡ್ಡೆ ಕಾಡಿಗೆ ಗುರುವಾರ ತೆರಳಿದ್ದಾರೆ.
.ಧರ್ಮಸ್ಥಳ ಪ್ರಕರಣ | ಸಿಕ್ಕಿದ್ದು ಪುರುಷರ ಬುರುಡೆ: ಎಸ್ಐಟಿ ಮೂಲಗಳಿಂದ ಮಾಹಿತಿ.
ಈ ಪ್ರಕರಣದ ಸಾಕ್ಷಿ ದೂರುದಾರ ಚಿನ್ನ ಸಿ.ಎನ್ ಅಲಿಯಾಸ್ ಚಿನ್ನಯ್ಯ ನ್ಯಾಯಾಲಯಕ್ಕೆ ಒಪ್ಪಿಸಿದ್ದ ತಲೆ ಬುರುಡೆಯನ್ನು ಕಾಡಿನಿಂದ ಹೊರತೆಗೆದಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಬಳಿಕ ಆ ತಲೆ ಬುರುಡೆಯನ್ನು ನಾನು ನೆಲದಿಂದ ಹೊರತೆಗೆದಿಲ್ಲ ಎಂದು ಚಿನ್ನ ಎಸ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದ. ತಲೆಬುರುಡೆ ತೆಗೆಯುವ ದೃಶ್ಯವನ್ನು ಚಿತ್ರೀಕರಿಸಿದ್ದ ಪ್ರದೀಪ್ ಕುಲಾಲ್ ಎಂಬಾತ ಈ ಬಗ್ಗೆ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದ. ಆತನನ್ನು ಎಸ್ಐಟಿ ಹಾಗೂ ವಿಧಿವಿಜ್ಞಾನ ತಂಡದ ಅಧಿಕಾರಿಗಳು ಜೊತೆಯಲ್ಲಿ ಕಾಡಿನೊಳಗೆ ಕರೆದೊಯ್ದಿದ್ದಾರೆ.
.ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ 7 ತಲೆ ಬುರುಡೆ, ನೂರಾರು ಮೂಳೆಗಳು ಪತ್ತೆ.
ತನಿಖೆ ವೇಳೆ ಅನೇಕ ಹೊಸ ವಿಚಾರಗಳು ಪತ್ತೆಯಾಗುತ್ತವೆ. ಅವುಗಳನ್ನು ಮತ್ತೆ ಖಚಿತ ಪಡಿಸಿಕೊಳ್ಳಬೇಕಿರುತ್ತದವೆ. ತಲೆಬುರುಡೆ ಪತ್ತೆಯಾದ ಸ್ಥಳಕ್ಕೆಸಂಬಂಧಿಸಿದ ಹೆಚ್ಚುವರಿ ದಾಖಲೆಗಳ ಅಗತ್ಯ ಇರುತ್ತದೆ. ಅದಕ್ಕಾಗಿ ವಿಧಿವಿಜ್ಞಾನ ತಂಡ ಹಾಗೂ ಎಸ್ಐಟಿ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಎಸ್ಐಟಿ ಅಧಿಕಾರಿಗಳು ಕಾಡಿನೊಳಗೆ ತೆರಳಿದ್ದು, ಸಂಜೆಯಾದರೂ ಹೊರಗೆ ಬಂದಿಲ್ಲ. ಟಾರ್ಚ್ ಮತ್ತಿತರ ಪರಿಕಗಳನ್ನು ಜೊತೆಯಲ್ಲಿ ಒಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
.ಬುರುಡೆ ತನಿಖೆ ನಡೆಸಿದ ಸರ್ಕಾರಕ್ಕೆ ಚಾಟಿ ಬೀಸಿದ ಸಿದ್ದರಾಮಯ್ಯ ಪರಮಾಪ್ತ: ಬಿಜೆಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.