ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಂದು ಮಧುಮೇಹ ಜಾಗೃತಿ ಜಾಥಾ

ಗಂಜಿಮಠದಲ್ಲಿ ಅಭಿಯಾನ, ವೇಗದ ನಡಿಗೆ
Last Updated 10 ನವೆಂಬರ್ 2018, 10:26 IST
ಅಕ್ಷರ ಗಾತ್ರ

ಬಜ್ಪೆ: ಗಂಜಿಮಠದಲ್ಲಿ ಇದೇ 14ರಂದು ವಿಶ್ವ ಮಧುಮೇಹ ದಿನದ ಅಂಗವಾಗಿ ಬೆಳಿಗ್ಗೆ 8ರಿಂದ 9ರವರೆಗೆ `ಮಧುಮೇಹಮುಕ್ತ ಭಾರತ ಜನಜಾಗೃತಿ ಅಭಿಯಾನ' ಪ್ರಯುಕ್ತ `ಮಧುಮೇಹ ತಡೆಗೆ ವೇಗದ ನಡಿಗೆ' ಬೃಹತ್ ಜನಜಾಗೃತಿ ಜಾಥ ನಡೆಯಲಿದೆ.

ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ(ಎಡಪದವು), ರಾಜ್ ಅಕಾಡೆಮಿ(ಗಂಜಿಮಠ), ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ಕಾವೇಶ್ವರ ವಲಯ), ಕಲಾವರ್ಧಕ ಯುವಕ ಮಂಡಲ(ನಾರಳಪದವು), ಗಾಂಧಿನಗರ ಫ್ರೆಂಡ್ಸ್, ಅಳಿಕೆ ಫ್ರೆಂಡ್ಸ್, ವಿಶ್ವ ಹಿಂದೂ ಪರಿಷತ್‌ ಬಜರಂಗದಳ ವೀರಶಿವಾಜಿ ಶಾಖೆ ಗಂಜಿಮಠ ಮತ್ತು ಗಂಜಿಮಠದ ಆಟೋರಿಕ್ಷಾ ಚಾಲಕ ಮಾಲಕರು ಪಾಲ್ಗೊಳ್ಳಲಿದ್ದಾರೆ. ಗಂಜಿಮಠ ಶ್ರೀ ಮಹಾಗಣಪತಿ ದೇವಳದ ಪ್ರಧಾನ ಅರ್ಚಕ ಗಣೇಶ ಭಟ್ ಜಾಥಕ್ಕೆ ಹಸಿರು ನಿಶಾನೆ ತೋರಿಸುವರು.

ಶಾಸಕ ರಾಜೇಶ ನಾಯ್ಕ್, ಯು ಪಿ ಇಬ್ರಾಹಿಂ(ಜಿಲ್ಲಾ ಪಂಚಾಯಿತಿ ಸದಸ್ಯ), ಪೂರ್ಣಿಮಾ ಜಿ. ಪೂಜಾರಿ(ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ), ಗಣೇಶ ಪೂಜಾರಿ(ಬಿಲ್ಲವ ಮಹಾಮಂಡಲ ಕಾರ್ಯದರ್ಶಿ), ಮಾಲತಿ(ಗಂಜಿಮಠ ಗ್ರಾಮ ಪಂಚಾಯಿತಿ ಅಧ್ಯಕ್ಷೆ), ಜಾಕೀರ್(ಗಂಜಿಮಠ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ), ಯತಿರಾಜ ಶೆಟ್ಟಿ(ರಾಜ್ ಅಕಾಡೆಮಿ), ಮೊಹಮ್ಮದ್ ಬ್ಯಾರಿ (ಐಡಿಯಲ್ ಶಾಲೆ), ಮಮತಾ ಶೆಟ್ಟಿ(ರಾಜ್ ಅಕಾಡೆಮಿ), ಗಣೇಶ್ ರಾವ್ ಕೈಕಂಬ, ಪ್ರಕಾಶ್ ಇಳಂತಿಲ(ಪತ್ರಕರ್ತ) ಡಾ. ಶ್ರೀಪತಿ ಕಿನ್ನಿಕಂಬಳ, ಪರಶಿವಮೂರ್ತಿ(ಬಜ್ಪೆ ಪೊಲೀಸ್ ಅಧಿಕಾರಿ) ಇರುವರು.

ಬೆಳಿಗ್ಗೆ 8.45ರಿಂದ 9.15ರವರೆಗೆ ಕೈಕಂಬದ ಶ್ರೀರಾಮ ಸಭಾಂಗಣದಲ್ಲಿ ಹೋಟೆಲ್ ಉದ್ಯಮಿ ಹರಿರಾವ್ ಕೈಕಂಬ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ‘ಮಧುಮೇಹ ನಿಯಂತ್ರಣದಲ್ಲಿ ಆಹಾರದ ಪಾತ್ರ’ ಎಂಬ ಬಗ್ಗೆ ಡಾ. ಸತೀಶ್ ಶಂಕರ್(ಅಧ್ಯಕ್ಷ, ಆಯುರ್‍ಸ್ಪರ್ಶ ಆಸ್ಪತ್ರೆ, ಗಂಜಿಮಠ) ಮಾತನಾಡುವರು. ಬೆಳಿಗ್ಗೆ 10ರಿಂದ 12.30ರವರೆಗೆ ಗಂಜಿಮಠ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT