ಶುಕ್ರವಾರ, ಜುಲೈ 1, 2022
23 °C

ಆಂಬುಲೆನ್ಸ್ ಆಗಿ ಪರಿವರ್ತನೆಯಾದ ನಿರುಪಯುಕ್ತ ವಾಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೊಂಕಣಿ ಅಕಾಡೆಮಿಯಲ್ಲಿ ಇದ್ದ ನಿರುಪಯೋಗಿ ವಾಹನವೊಂದನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು  ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಆಗಿ ಪರಿವರ್ತಿಸಲಾಯಿತು. 

ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಈ ವಾಹನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ್ದು, ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಮತ್ತು ರೋಗಿಗಳು ಮೃತಪಟ್ಟರೆ ಉಚಿತವಾಗಿ ಸೇವೆ ಒದಗಿಸಲು ಬಳಸಲಾಗುವುದು.

ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರ ಒಪ್ಪಿಗೆ ಮೇರೆಗೆ ಗುರುವಾರ ಈ ವಾಹನ ಹಸ್ತಾಂತರಿಸಲಾಯಿತು. ಸೇವಾಂಜಲಿ ಟ್ರಸ್ಟ್ ನ ವತಿಯಿಂದ ಹನುಮಂತ ಕಾಮತ್, ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್, ಕೊಂಕಣಿ ಅಕಾಡೆಮಿ ಪರವಾಗಿ ಸದಸ್ಯರಾದ ಅರುಣ್ ಜಿ ಶೇಟ್, ಗೋಪಾಲಕೃಷ್ಣ ಭಟ್, ಕೆನ್ಯೂಟ ಜೀವನ್ ಪಿಂಟೋ, ನವೀನ್ ನಾಯಕ್ ಹಾಗೂ ರಿಜಿಸ್ಟ್ರಾರ್  ಮನೋಹರ್ ಕಾಮತ್ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು