ಮೂಡುಬಿದಿರೆ (ದಕ್ಷಿಣ ಕನ್ನಡ): ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವಾಗಲೇ ಅಮ್ಮನನ್ನು ಕಳೆದುಕೊಂಡರೂ ಧೃತಿಗೆಡದೆ ಅಭ್ಯಾಸ ಮಾಡಿದ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿದ್ದಾಳೆ.

‘ಮೂರು ವಿಷಯಗಳ ಪರೀಕ್ಷೆಗಳು ಮುಗಿದಿದ್ದವು ಅಷ್ಟೆ, ಜೀವನ ಪರೀಕ್ಷೆಯ ಆಘಾತ ಬರಸಿಡಿಲಿನಂತೆ ಎರಗಿತು. ಅಮ್ಮ ನಮ್ಮನ್ನು ಬಿಟ್ಟು ಹೊರಟೇ ಬಿಟ್ಟರು. ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದ ಅಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಕ್ಷಣದ ನನ್ನೊಳಗಿನ ಸಂಘರ್ಷವೇ ಸಾಧನೆಯ ದಾರಿಯಲ್ಲಿ ಕೈ ಹಿಡಿದು ಮುನ್ನಡೆಸಿತು. ಒಂದನ್ನು ಕಳೆದು ಕೊಂಡಿದ್ದಾಯಿತು, ಇನ್ನೊಂದನ್ನು ಕಳೆದುಕೊಳ್ಳುವುದು ಬೇಡವೆಂದು ಪರೀಕ್ಷೆಯೆಡೆಗೆ ಹೆಚ್ಚು ಗಮನ ಹರಿಸಿದೆ’ ಎನ್ನುತ್ತ ದಿಶಾ ಗದ್ಗದಿತಳಾದಳು.

‘ನಾನು ಚೆನ್ನಾಗಿ ಓದಬೇಕು ಎಂಬುದೇ ಅಮ್ಮನ ಆಸೆಯಾಗಿತ್ತು. ಅಮ್ಮನನ್ನು ಮನದಲ್ಲಿ ತುಂಬಿಕೊಂಡು ಅಭ್ಯಾಸದಲ್ಲಿ ಲಕ್ಷ್ಯವನ್ನು ಕೇಂದ್ರೀಕರಿಸಿದೆ. ಪರಿಶ್ರಮಕ್ಕೆ ಫಲಿತಾಂಶ ದೊರೆತಿದೆ. ರ್ಯಾಂಕ್ ಗಳಿಸಬೇಕೆಂದು ಸಾಕಷ್ಟು ಶ್ರಮಪಟ್ಟಿದ್ದೇನೆ. ಇಂಗ್ಲಿಷ್ನಲ್ಲಿ ಅಂಕ ಕಡಿಮೆಯಾಗಬಹುದೆಂಬ ಭಯದಲ್ಲಿ ಇಂಗ್ಲಿಷ್ ಓದಿಗೆ ಹೆಚ್ಚು ಸಮಯ ಮೀಸಲಿಟ್ಟಿದ್ದೆ. ರ್ಯಾಂಕ್ ಬರುವ ನಿರೀಕ್ಷೆ ಇತ್ತು ಹಾಗೂ ಪೂರ್ಣ ಅಂಕ ಬರುವ ನಿರೀಕ್ಷೆಯೂ ಇತ್ತು’ ಎನ್ನುವಾಗ ಅವರ ಮಾತಿನಲ್ಲಿ ಆತ್ಮವಿಶ್ವಾಸವಿತ್ತು.

‘ಸಿ.ಎ ಮಾಡುವ ಗುರಿ ಇದೆ. ಸಿ.ಎ. ಫೌಂಡೇಷನ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇನೆ. ಕಾಲೇಜಿನಲ್ಲಿ ಆಗಾಗ ನಡೆಸುವ ಪರೀಕ್ಷೆಗಳು, ವಿಷಯಗಳ ಪುನರಾವರ್ತನೆ ಉತ್ತಮ ಅಂಕ ಗಳಿಕೆಗೆ ಪೂರಕವಾದವು. ದಿನದಲ್ಲಿ ಎಷ್ಟು ಅವಧಿ ಅಭ್ಯಾಸ ಮಾಡಿದ್ದೇವೆ ಎನ್ನುವುದಕ್ಕಿಂತ ಎಷ್ಟು ಹೊತ್ತು ಗಮನವಿಟ್ಟು ಓದುತ್ತೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ದಿಶಾ ಹೇಳಿದಳು. ಈಕೆ ಮೂಡುಬಿದಿರೆ ಪುತ್ತಿಗೆ ಪದವು ದಿನೇಶ್ ಅವರ ಪುತ್ರಿ.

‘ತಾಯಿಯನ್ನು ಕಳೆದುಕೊಂಡ ದಿಶಾಳನ್ನು ನಾವು ನಮ್ಮ ಸುಪರ್ದಿಯಲ್ಲಿಟ್ಟುಕೊಂಡು ವಿಶೇಷ ಲಕ್ಷ್ಯವಹಿಸಿ ಪರೀಕ್ಷೆಗೆ ಅಣಿಗೊಳಿಸಿದ್ದೆವು. ಇಂಗ್ಲಿಷ್ ವಿಷಯದಲ್ಲಿ ಆಕೆಗಿದ್ದ ಭಯವನ್ನು ದೂರ ಮಾಡಲು ಸಾಕಷ್ಟು ಶ್ರಮ ಹಾಕಿದೆವು. ಎಲ್ಲದರ ಫಲವಾಗಿ ಆಕೆ ಉತ್ತಮ ಸಾಧನೆ ಮಾಡಿದ್ದಾಳೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ 95 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 10ರೊಳಗಿನ ರ್ಯಾಂಕ್ ಪಡೆದಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಸಾಧನೆ ಮಾಡಿರುವ 75 ವಿದ್ಯಾರ್ಥಿಗಳು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ತೋರಿದ್ದಾರೆ’ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.