‘ಪಕ್ಷದ ಕಾರ್ಮಿಕ ಘಟಕವು ಸಂತ್ರಸ್ತರ ಪರವಾಗಿ ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಸರ್ಕಾರದ ಮತ್ತು ಜಿಲ್ಲಾಡಳಿತದ ಗಮನ ಸೆಳೆದಿತ್ತು. ಈ ಹೋರಾಟದ ಫಲವಾಗಿ, ಇದೇ 30ರ ಒಳಗೆ ಸಂತ್ರಸ್ತರಿಗೆ ಕೆಲಸ ನೀಡಲು ಜಿಎಂಪಿಎಲ್ ಕಂಪನಿ ಒಪ್ಪಿದೆ. ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಭಾರಿ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರೂ ಸಹಕರಿಸಿದ್ದಾರೆ’ ಎಂದರು.