ನಿರಾಶ್ರಿತರಿಗೆ ಸಾಮಗ್ರಿಗಳ ವಿತರಣೆ

7

ನಿರಾಶ್ರಿತರಿಗೆ ಸಾಮಗ್ರಿಗಳ ವಿತರಣೆ

Published:
Updated:
Deccan Herald

ಬದಿಯಡ್ಕ: ಕೇರಳ ರಾಜ್ಯದ ನೆರೆ ಹಾವಳಿ ಸಂತ್ರಸ್ತರಿಗೆ ಬದಿಯಡ್ಕ ಶ್ರೀ ಭಾರತೀವಿದ್ಯಾಪೀಠದಿಂದ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ಕಳುಹಿಸಿ ಕೊಡಲಾಯಿತು.

ಶಾಲೆಯಲ್ಲಿ ಶನಿವಾರ ನಡೆದ ಸರಳ ಸಮಾರಂಭದಲ್ಲಿ ಸ್ಕೌಟ್ ಜಿಲ್ಲಾ ಕಮಿಶನರ್ ಗುರುಮೂರ್ತಿ ನಾಯ್ಕಾಪು, ಗೈಡ್ ಜಿಲ್ಲಾ ಕಮಿಶನರ್ ಭಾರ್ಗವಿ ಕುಟ್ಟಿ, ಸ್ಕೌಟ್ ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಿರಣ್ ಮಾಸ್ತರ್ ಹಾಗೂ ಕುಂಟಿಕಾನ ಶಾಲಾ ಸ್ಕೌಟ್ಸ್‌ ಅಧ್ಯಾಪಕ ಪ್ರಶಾಂತ ಕುಮಾರ್ ನಿರಾಶ್ರಿತರಿಗಿರುವ ಸಾಮಗ್ರಿಗಳನ್ನು ಸ್ವೀಕರಿಸಿ ಅದನ್ನು ಕೇರಳದಲಲ್ಲಿ ಕಷ್ಟದಲ್ಲಿರುವ ಅಗತ್ಯ ಫಲಾನುಭವಿಗಳಿಗೆ ತಲುಪಿಸುವ ನೇತೃತ್ವ ವಹಿಸಿದ್ದರು.

ವಿದ್ಯಾಪೀಠ ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಶಿಕ್ಷಕ ಮಹೇಶ್ ಕೆ. ಹಾಗೂ ವಿದ್ಯಾರ್ಥಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !