ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

38 ಮಂದಿಗೆ ಈ ಬಾರಿಯ ಗೌರವ

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
Last Updated 31 ಅಕ್ಟೋಬರ್ 2020, 4:15 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಸಂಘ–ಸಂಸ್ಥೆಗಳು ಸೇರಿದಂತೆ 38 ಮಂದಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತರು: ವಾಸ್‌ಲೇನ್‌ನ ಪ್ರೊ.ಎ.ವಿ. ನಾವಡ (ಸಾಹಿತ್ಯ/ಶಿಕ್ಷಣ), ಅಶೋಕನಗರದ ಡಾ.ಯು.ವಿ. ಶೆಣೈ (ವೈದ್ಯಕೀಯ), ಬಂಟ್ವಾಳ ತಾಲ್ಲೂಕು ನೆತ್ತರಕೆರೆಯ ನವೋದಯ ಮಿತ್ರಕಲಾ ವೃಂದ (ಸಮಾಜ ಸೇವೆ), ಅಬ್ದುಲ್‌ ಸತ್ತಾರ್‌ (ಸಾಹನ/ಕ್ರೀಡೆ), ಎಂ. ಸುಬ್ರಹ್ಮಣ್ಯ ಭಟ್‌ (ಸಮಾಜ ಸೇವೆ), ಬಂಟ್ವಾಳ ತಾಲ್ಲೂಕು ಅನಂತಾಡಿಯ ಬಿ. ಚೇತನ್‌ ರೈ ಮಾಣಿ (ರಂಗಭೂಮಿ ಕಲಾವಿದ, ಕಿರುತೆರೆ, ಚಿತ್ರನಟ), ಸುಳ್ಯದ ದೊಡ್ಡಣ್ಣ ಬರೆಮೇಲು (ಕ್ರೀಡೆ), ಸುಳ್ಯ ತಾಲ್ಲೂಕು ಐವರ್ನಾಡಿನ ಕೆ.ವಿಶ್ವನಾಥ ಪೈ (ಕೃಷಿ), ಪುತ್ತೂರು ತಾಲ್ಲೂಕು ಸುಳ್ಯಪದವಿನ ವಿದುಷಿ ನಯನ ವಿ. ರೈ (ನೃತ್ಯ), ಪುತ್ತೂರಿನ ಬಿ.ಟಿ. ರಂಜನ್‌ ಶೆಣೈ (ಪತ್ರಿಕೋದ್ಯಮ), ಪುತ್ತೂರು ತಾಲ್ಲೂಕು ಪಡ್ನೂರಿನ ಚಂದ್ರಶೇಖರ್‌ ಹೆಗ್ಡೆ ಪುತ್ತೂರು (ಕಲಾಕ್ಷೇತ್ರ), ಬೆಳ್ತಂಗಡಿಯ ಅಳದಂಗಡಿಯ ಸುಂದರ ದೇವಾಡಿಗ (ವಾದ್ಯ ಕಲಾವಿದ), ಬೆಳ್ತಂಗಡಿ ತಾಲ್ಲೂಕು ಗುರುವಾಯನಕೆರೆಯ ಡಾ.ವೇಣುಗೋಪಾಲ ಶರ್ಮ ಎಸ್‌. (ವೈದ್ಯಕೀಯ ಸೇವೆ), ಧರ್ಮಸ್ಥಳದ ವೀರಕೇಸರಿ (ಸಮಾಜಸೇವೆ), ಬೆಳ್ತಂಗಡಿಯ ಡಾ.ವೈ. ಉಮಾನಾಥ ಶೆಣೈ (ಇತಿಹಾಸ), ಮೂಡುಬಿದಿರೆ ತಾಲ್ಲೂಕು ಅತಿಕಾರಿಬೆಟ್ಟಿವಿನ ಗಣೇಶ್‌ ಕೊಲೆಕಾಡಿ (ಯಕ್ಷಗಾನ ಹಾಗೂ ರಂಗಭೂಮಿ).

ಮೂಡುಬಿದಿರೆ ತಾಲ್ಲೂಕಿನ ಮಾರ್ಪಾಡಿಯ ಗಂಗಯ್ಯ ಪರವ (ದೈವ ಪಾತ್ರಿ), ಮೂಡುಬಿದಿರೆ ತಾಲ್ಲೂಕು ಪಾಲಡ್ಕದ ಭಾಸ್ಕರ್‌ (ಕ್ರೀಡಾಕ್ಷೇತ್ರ–ಕರಾಟೆ), ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ (ಸಾಮಾಜಿಕ/ಶೈಕ್ಷಣಿಕ/ವೈದ್ಯಕೀಯ/ಕ್ರೀಡೆ), ಉಳ್ಳಾಲದ ಎ.ಕೆ. ಮೊಯಿದ್ದೀನ್‌ (ಸಮಾಜ ಸೇವೆ), ಸೋಮೇಶ್ವರ ಕೊಲ್ಯದ ಕೆ. ಸೀತಾರಾಮ ಬಂಗೇರ (ಸಾಮಾಜಿಕ ಮತ್ತು ಧಾರ್ಮಿಕ), ಬಂಟ್ವಾಳ ತಾಲ್ಲೂಕು ಪಜೀರಿನ ಸೇಸಪ್ಪ ಪೂಜಾರಿ (ಸಮಾಜಸೇವೆ), ಬೈಕಂಪಾಡಿಯ ಯೋಗೀಶ್‌ ಕಾಂಚನ್‌ (ಸಾಹಿತ್ಯ), ಸುರತ್ಕಲ್‌ ಬಂಟರ ಸಂಘ (ಸಮಾಜಸೇವೆ), ಸುರತ್ಕಲ್‌ನ ಪದ್ಮನಾಭ ಕೆ. (ಶಿಲ್ಪಕಲೆ/ಚಿತ್ರಕಲೆ), ಕದ್ರಿ ಕ್ರಿಕೆಟರ್ಸ್‌ (ಸಮಾಜಸೇವೆ), ಉರ್ವ ಚಿಲಿಂಬಿಯ ಡಾ.ಎಂ. ಮುರಳಿಕುಮಾರ್ (ನಾಟಿವೈದ್ಯ), ಕುದ್ರೋಳಿ ಅಳಕೆಯ ಹ್ಯೂಮನ್‌ ರೈಟ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ (ಸಮಾಜಸೇವೆ).

ಸೂಟರ್‌ಪೇಟೆಯ ಪ್ರಜ್ವಲ್‌ ಯುವಕ ಮಂಡಲ (ಶೈಕ್ಷಣಿಕ/ಸಾಮಾಜಿಕ/ಸಾಂಸ್ಕೃತಿಕ), ಹಂಪನಕಟ್ಟೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾರಿಗಳ ನಾಗರಿಕ ಜಾಗೃತಿ ಸಮಿತಿ (ಸಮಾಜ ಸೇವೆ), ಪದವು ಹೈಸ್ಕೂಲ್‌ ರಸ್ತೆಯ ಫ್ರಾನ್ಸಿಸ್‌ ಮ್ಯಾಕ್ಸಿಮ್‌ ಮೊರಾಸ್‌ (ಸಮಾಜಸೇವೆ), ಪ್ರಾಧ್ಯಾಪಕ ಡಾ.ಅನಂತ್‌ ಜಿ. ಪ್ರಭು (ಸಮಾಜಸೇವೆ), ಬಲ್ಮಠದ ಶ್ರೀನಿವಾಸ್‌ ನಾಯಕ್‌ (ದೃಶ್ಯ ಮಾಧ್ಯಮ), ಬೆಳ್ತಂಗಡಿ ತಾಲ್ಲೂಕು ಬೆಳಾಲಿನ ಜಿನ್ನಪ್ಪಗೌಡ (ಪತ್ರಿಕೋದ್ಯಮ), ಬೆಳ್ತಂಗಡಿ ತಾಲ್ಲೂಕು ಬೆಳಾಲಿನ ಕಸ್ತೂರ್ಬಾ ಸಂಜೀವಿನಿ ಮಹಿಳಾ ಸಂಘ (ಕೃಷಿ), ಮಂಜೇಶ್ವರದ ಸ್ನೇಹಾಲಯ ಚಾರಿಟಬಲ್‌ ಟ್ರಸ್ಟ್‌ (ಸಮಾಜಸೇವೆ–ಗಡಿನಾಡು), ಹಂಪನಕಟ್ಟೆಯ ಸುರೇಶ್‌ ಶ್ಯಾಮರಾವ್‌ ನೇರಂಬಳ್ಳಿ (ಹೊರನಾಡು ಕನ್ನಡಿಗ/ಸಮಾಜ ಸೇವೆ), ಉರ್ವದ ಜೈಭಾರತಿ ತರುಣ ವೃಂದ (ಸಮಾಜ ಸೇವೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT