ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಲ್ಲಿ ಪುನರ್‌ ಸಂಘಟನೆ: ಲುಕ್ಮಾನ್

ಕೋಮುವಾದಿ–ಮೂಲಭೂತವಾದಗಳಿಂದ ದೂರ: ಸಂವಿಧಾನವೇ ಆಧಾರ
Last Updated 9 ಫೆಬ್ರುವರಿ 2021, 12:49 IST
ಅಕ್ಷರ ಗಾತ್ರ

ಮಂಗಳೂರು: ‘ಮೂರು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್‌ ಪುನರ್‌ ಸಂಘಟಿಸಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಅವರು ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ, ‘ಪ್ರತಿ ಘಟಕಕ್ಕೆ ನೇಮಕ ಹಾಗೂ ಪ್ರತಿ ಹಳ್ಳಿಯಲ್ಲಿ ಪಕ್ಷದ ವಿಚಾರಧಾರೆ ಹೊಂದಿದ 10ರಿಂದ 20 ಯುವಜನರ ತಂಡವನ್ನು ರಚಿಸಲಾಗುವುದು. ಯುವ ಕಾಂಗ್ರೆಸ್ ಸಂಘಟನೆ ಹಾಗೂ ಇತಿಹಾಸ ಹೊಂದಿದ್ದು, ಬಲವರ್ಧನೆ ನಿಟ್ಟಿನಲ್ಲಿ ಸಂಘಟಿಸಲಾಗುವುದು’ ಎಂದು ವಿವರಿಸಿದರು.

‘ಕೋಮುವಾದ ಮತ್ತು ಮೂಲಭೂತವಾದವನ್ನು ದೂರವಿಟ್ಟು, ಸಂವಿಧಾನ ನೀಡಿದ ನೈಜ ಜಾತ್ಯತೀತ, ಸಮಾಜವಾದಿ, ಮಾನವತಾವಾದಿ ತತ್ವಗಳನ್ನು ಯುವಜನತೆಗೆ ತಲುಪಿಸಲಾಗುವುದು. ‘ದೇಶಭಕ್ತಿ’ಯ ಹೆಸರಿನಲ್ಲಿ ಸಮಾಜ ಒಡೆಯುವ ‘ನಕಲಿ ದೇಶಭಕ್ತ’ ಶಕ್ತಿಗಳ ವಿರುದ್ಧ ನೈಜ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಪ್ರಜಾಪ್ರಭುತ್ವ, ಸಂವಿಧಾನ, ದೇಶಪ್ರೇಮದ ಕಾಂಗ್ರೆಸ್ ವಿಚಾರಧಾರೆ, ಸೌಮ್ಯ ಸಮಾಜವಾದ, ಧರ್ಮನಿರಪೇಕ್ಷತೆ, ಅಹಿಂಸಾತ್ಮಕ ಹೋರಾಟ, ಸದಾಶಯದ ಭಿನ್ನ ಅಭಿಪ್ರಾಯಗಳಿಗೂ ಗೌರವವೇ ನಮ್ಮ ಆದ್ಯತೆ’ ಎಂದರು.

‘ದೇಶದ ಐಕ್ಯತೆ, ರಾಜ್ಯದ ಅಸ್ಮಿತೆ, ಸ್ಥಳೀಯ ವಿಚಾರಗಳು, ವ್ಯಕ್ತಿ ಗೌರವಗಳು ನಮ್ಮ ಹೋರಾಟದ ಭಾಗವಾಗಲಿವೆ. ಅದಕ್ಕಾಗಿ ಶಾಂತಿಯುತ ಹೆಜ್ಜೆ ಇಡುತ್ತೇವೆ. ಯುವ ಸಮೂಹದಲ್ಲಿ ತಾತ್ವಿಕ, ವೈಚಾರಿಕ, ಸೈದ್ಧಾಂತಿಕ ವಿಚಾರ ಮೂಡಿಸಬೇಕಿದೆ. ಇದಕ್ಕಾಗಿ ಕಾರ್ಯಕರ್ತರ ಪಡೆ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಲಪಡಿಸಲಾಗುವುದು’ ಎಂದರು.

ಎನ್‌ಎಸ್‌ಯುಐ ರಾಷ್ಟ್ರೀಯ ಸಂಯೋಜಕ ಅನ್ವಿತ್ ಕಟೀಲ್, ಸಂಜನಾ ಛಲವಾದಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಫಿರೋಜ್‌ ಮಲಾರ್, ಶಾಹುಲ್ ಹಮೀದ್, ಅನಿಲ್ ಪೈ, ಸುರೇಶ್ ಜೋಯ, ಸರ್ಫ್ರಾಜ್‌ ಬಾಳ ಇದ್ದರು.

ಯುವ ಕಾಂಗ್ರೆಸ್ ಪದಾಧಿಕಾರಿಗಳು

ಜಿಲ್ಲಾ ಘಟಕ: ಲುಕ್ಮಾನ್ ಬಂಟ್ವಾಳ (ಅಧ್ಯಕ್ಷ) ಗಿರೀಶ್ ಆಳ್ವ (ಉಪಾಧ್ಯಕ್ಷ), ಶೊಹೈಬ್‌ (ಪ್ರಧಾನ ಕಾರ್ಯದರ್ಶಿ)

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ: ಸುರೇಶ್ ಜೋರ (ಬಂಟ್ವಾಳ), ಶಕೀಲ್ ಕಕ್ಕಿಂಜೆ (ಬೆಳ್ತಂಗಡಿ ಗ್ರಾಮೀಣ), ಅನಿಲ್‌ ಪೈ (ಬೆಳ್ತಂಗಡಿ ನಗರ), ಮೊಹಮ್ಮದ್‌ ಮುಫೀದ್‌ (ಗುರುಪುರ), ಅಭಿಲಾಷ್‌ (ಕಡಬ), ರಾಕೇಶ್ ದೇವಾಡಿಗ (ಮಂಗಳೂರು ನಗರ), ಸುನಿಲ್ ಕುಮಾರ್ (ಮಂಗಳೂರು ದಕ್ಷಿಣ), ಜಯಕುಮಾರ್ (ಮೂಡುಬಿದಿರೆ), ಅಶೋಕ್ ಹರೀಶ್ (ಮುಲ್ಕಿ), ಇಬ್ರಾಹಿಂ ನವಾಜ್‌ (ಪಾಣೆಮಂಗಳೂರು), ಶ್ರೀ ಪ್ರಸಾದ್‌ (ಪುತ್ತೂರು), ಶಾಹುಲ್ ಹಮೀದ್ (ಸುಳ್ಯ), ಜೈಸನ್ (ಸುರತ್ಕಲ್‌), ಫೈರೋಜ್ (ಉಳ್ಳಾಲ), ಸಿದ್ದಿಕ್ ಅಕ್ಬರ್‌ (ವಿಟ್ಲ– ಉಪ್ಪಿನಂಗಡಿ), ಮೊಹಮ್ಮದ್ ನವಾಜ್ (ಮುಡಿಪು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT