‘ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿ ಆದ್ಯತೆ’

7

‘ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿ ಆದ್ಯತೆ’

Published:
Updated:
ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ವೈದ್ಯರ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಧಿಕಾರಿ ಡಾ. ರಾಮಕೃಷ್ಣ ರಾವ್‌ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು: ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ತುಂಬಾ ಪವಿತ್ರವಾದುದ್ದು. ರೋಗಿಗಳ ಜೀವ ರಕ್ಷಣೆಯೇ ವೈದ್ಯ ವೃತ್ತಿಯ ಕರ್ತವ್ಯ ಎಂದು ಡಾ. ಶಾಂತಾರಾಮ ಶೆಟ್ಟಿ ಹೇಳಿದರು.

ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದಲ್ಲಿ ರೆಡ್‌ಕ್ರಾಸ್, ಕೆನರಾ ಆರ್ಥೋಪಿಡಿಕ್ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ವೈದ್ಯರೆಲ್ಲರೂ ಅಭಿಮಾನ ಪಡುವ ವೈದ್ಯ, ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಶ್ರೇಷ್ಠ ರಾಜಕೀಯ ಧುರೀಣ, ಅಪ್ರತಿಮ ವ್ಯಕ್ತಿತ್ವದ ಡಾ. ಬಿ.ಸಿ. ರಾಯ್ ಅವರ ಜನ್ಮ ದಿನವನ್ನು ವೈದ್ಯರ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ವೈದ್ಯ ಸಮೂಹದ ಭಾಗ್ಯ.  ನಾವೆಲ್ಲರೂ ಸಂತಸ ಪಡುವ ದಿನ. ಡಾ. ಬಿ.ಸಿ.ರಾಯ್‌ ಅವರ ಸೇವೆ ಸಮಾಜಕ್ಕೆ, ವೈದ್ಯ ಸಮೂಹಕ್ಕೆ ಮಾದರಿ ಆಗಿವೆ ಎಂದು ಅವರು ಹೇಳಿದರು.

ರೆಡ್‌ಕ್ರಾಸ್‌ ಸಂಸ್ಥೆಯ ಡಾ. ಸುಶೀಲ್‌ ಜತ್ತಣ್ಣ ಮಾತನಾಡಿ, ವೈದ್ಯರು ಪ್ರತಿ ದಿನವೂ ಹೊಸ ಸವಾಲನ್ನು ಎದುರಿಸುವ ಕ್ಷೇತ್ರ ವೈದ್ಯಕೀಯ ಕ್ಷೇತ್ರ. ರೋಗಿಗಳ ಜೀವ ಉಳಿಸುವ ಹೊಣೆಯ ಜತೆಗೆ ಸ್ವಾಸ್ಥ್ಯ ಆರೋಗ್ಯ ಸಮಾಜ ನಿರ್ಮಾಣ ಕೂಡಾ ವೈದ್ಯರದು. ವೈದ್ಯರು ಇದ್ದರೆ ರೋಗಿ, ರೋಗಿ ಇದ್ದರೆ ವೈದ್ಯ. ಇಲ್ಲಿ ಇಬ್ಬರು ಮುಖ್ಯ, ವೈದ್ಯರು ಬೇಕು, ರೋಗಿಗಳು ಬೇಕು ಎಂದು ಅವರು ಹೇಳಿದರು.

ರೆಡ್‌ಕ್ರಾಸ್‌ ಮೂಲಕ ರಕ್ತನಿಧಿ ಸಂಗ್ರಹ ಕಾರ್ಯವೂ ನಡೆಯುತ್ತಿದೆ. ಡಾ. ಬಿ.ಸಿ.ರಾಯ್‌ ಅವರ ಜನ್ಮದಿನ ಆಚರಣೆ ವೈದ್ಯರಿಗೆಲ್ಲ ಖುಷಿ ತರುವ ಆಚರಣೆ. ನಿತ್ಯವೂ ರೋಗಿ, ಶಸ್ತ್ರ ಚಿಕಿತ್ಸೆ ಸೇರಿದಂತೆ ಇನ್ನಿತರ ಕೆಲಸಗಳ ಕಾರ್ಯಗಳ ಒತ್ತಡದಲ್ಲಿದ್ದ ವೈದ್ಯರಿಗೆ ಸ್ವಲ್ಪ ಸಮಯವಾದರೂ ಬಿಡುವ ಸಿಗುವಂತಹ ಕಾರ್ಯಕ್ರಮ ಇದು. ಇದರ ಅಂಗವಾಗಿ ರಿಕ್ಷಾ ಚಾಲಕ ಮತ್ತು ಕುಟುಂಬ ಸದಸ್ಯರ  ಆರೋಗ್ಯ ತಪಾಸಣೆ, ಬಿಎಂಡಿ ಶಿಬಿರ, ರಕ್ತದಾನ ಶಿಬಿರ ಜತೆಗೆ ವೈದ್ಯರ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಕೆ.ಆರ್‌. ಕಾಮತ್‌, ಡಾ. ದಿವಾಕರ್‌, ಡಾ. ಈಶ್ವರ್‌, ಡಾ. ಅಣ್ಣಯ್ಯ ಸೇರಿದಂತೆ ಹಲವಾರು ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !