ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಯದ ಯುವಕನಿಗೆ ಅಬುಧಾಬಿ ಲಾಟರಿಯಲ್ಲಿ ₹23 ಕೋಟಿ 

Last Updated 4 ಅಕ್ಟೋಬರ್ 2019, 14:27 IST
ಅಕ್ಷರ ಗಾತ್ರ

ಸುಳ್ಯ: ಅಬುಧಾಬಿ ಲಾಟರಿ ಡ್ರಾದಲ್ಲಿ ಸುಳ್ಯದ ಯುವಕನಿಗೆ ಅದೃಷ್ಟ ₹23 ಕೋಟಿ ಒಲಿದಿದೆ.

ಗುರುವಾರ ಡ್ರಾ ಮಾಡಲಾದ ಬಿಗ್ ಟಿಕೆಟ್ ರಾಫೆಲ್ ಲಾಟರಿಯ ಪ್ರಥಮ ಬಹುಮಾನ 12 ದಶಲಕ್ಷ ದಿರ್ಹಂ ಸುಳ್ಯ ಜಟ್ಟಿಪಳ್ಳದ ಮಹಮ್ಮದ್ ಫಯಾಜ್ ಅವರಿಗೆ ಲಭಿಸಿದೆ. ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್ 6 ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು. ಇದೀಗ ಪ್ರಥಮ ಬಹುಮಾನ ಒಲಿದು ಬಂದಿದೆ.

ಕಳೆದ ತಿಂಗಳು ದುಬೈ ಮೂಲದ ಫಿಲಿಪಿನಾ 10 ದಶಲಕ್ಷ ಡಾಲರ್ ಗೆದ್ದಿದ್ದರು. ‘ಮಾಧ್ಯಮದೊಂದಿಗೆ ಮಾತನಾಡಿದ ಫಯಾಜ್, ಮೂತ್ರಪಿಂಡದ ಕಾಯಿಲೆಗಳಿಂದಾಗಿ ನನ್ನ ತಂದೆ ತಾಯಿ ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರು. ಅವರು 12 ವರ್ಷಗಳಿಗಿಂತ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯ ಒಳಗಾಗಿದ್ದರು. ನನಗೆ ತಂಗಿ ಇದ್ದಾರೆ. ನನ್ನ ಅಕ್ಕ ಮದುವೆಯಾಗಿದ್ದಾರೆ. ಮನೆ ನಿರ್ಮಿಸಲು ನಾವು ನಮ್ಮ ಜಮೀನಿನ ಒಂದು ಭಾಗವನ್ನು ಮಾರಿದ್ದೆವು. ಒಂದು ವರ್ಷದ ಹಿಂದೆ ಮುಂಬೈಗೆ ಬಂದಿದ್ದೇವೆ’ ಎಂದು ಹೇಳಿದ್ದಾರೆ. ‘ಮೊದಲು ನಂಬಲು ಆಗಲಿಲ್ಲ. ಬಳಿಕ ಆನ್‌ಲೈನ್ ನಲ್ಲಿ ಪರಿಶೀಲಿಸಿ ಖಚಿತ ಪಡಿಸಿದೆ’ಎಂದು ಫಯಾಜ್ ಹೇಳಿದ್ದಾರೆ.

ಕೇರಳದ ಓಣಂ ಲಾಟರಿಯಲ್ಲಿ ಸುಳ್ಯದ ನಿತೀಶ್ ಹೊಟೇಲ್ ಮಾಲಿಕ ಸುಧಾಮ ಅವರಿಗೆ ₹1 ಕೋಟಿ ಬಂದಿತ್ತು. ಇದೀಗ ಅದಕ್ಕಿಂತ ದೊಡ್ಡ ಮೊತ್ತ ಸುಳ್ಯಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT