ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕವಸ್ತು ಮಾರಾಟ: ನಾಲ್ವರ ಬಂಧನ

Last Updated 1 ನವೆಂಬರ್ 2019, 15:11 IST
ಅಕ್ಷರ ಗಾತ್ರ

ಮಂಗಳೂರು: ನಗರದ ಮೋರ್ಗನ್ಸ್‌ ಗೇಟ್‌ ಬಳಿ ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಕೊಕೇನ್‌, ಚರಸ್‌ ಹಾಗೂ ಮಾದಕವಸ್ತುಗಳಾಗಿ ಬಳಸುವ ಎಂಡಿಎಂಎ, ಎಲ್‌ಎಸ್‌ಡಿ ಮತ್ತು ಫಿಲ್ಸ್‌ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ರಥಬೀದಿ ನಿವಾಸಿ ಕಿಶನ್‌ ಹೆಗ್ಡೆ (19), ಫಳ್ನೀರ್‌ನ ವಾಸ್‌ ಲೇನ್‌ ನಿವಾಸಿ ಹಬೀಲ್‌ ಅಹಮ್ಮದ್ (19), ರಥಬೀದಿ ನಿವಾಸಿ ಅನಂತ್‌ ಕುಡ್ವ (21) ಮತ್ತು ಅತ್ತಾವರದ ವೈದ್ಯನಾಥ ನಗರದ ಗೋಪಿನಾಥ ಭಂಡಾರ್ಕರ್‌ (24) ಬಂಧಿತರು. ಆರೋಪಿಗಳಿಂದ 22 ಗ್ರಾಂ. ಕೊಕೇನ್‌, 6 ಗ್ರಾಂ. ಎಂಡಿಎಂಎ ಮಾತ್ರೆಗಳು, 5 ಎಲ್‌ಎಸ್‌ಡಿ ಮಾತ್ರೆಗಳು ಮತ್ತು 75 ಫಿಲ್ಸ್‌ ಗುಳಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ಆರೋಪಿಗಳಿಂದ ಮೂರು ಮೊಬೈಲ್‌ ಫೋನ್‌, ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹ 3 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರ ಅಪರಾಧ ಘಟಕ (ಸಿಸಿಬಿ) ಹಾಗೂ ಆರ್ಥಿಕ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣ (ಇ ಅಂಡ್‌ ಎನ್‌) ಪೊಲೀಸ್‌ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇ ಅಂಡ್‌ ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT