ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಠ್ಯ ಬೋಧನೆ ಡಿಜಿಟಲೀಕರಣ ಅಗತ್ಯ’

ಆಗ್ನೆಸ್ ಕಾಲೇಜಿನಲ್ಲಿ ಇ - ತಂತ್ರಜ್ಞಾನ ಕಾರ್ಯಗಾರ
Last Updated 4 ಅಕ್ಟೋಬರ್ 2022, 6:08 IST
ಅಕ್ಷರ ಗಾತ್ರ

ಮಂಗಳೂರು: ನಗರದ ಸೇಂಟ್ ಆಗ್ನೆಸ್ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಸಾಫ್ಟವೇರ್ ಸಂಬಂಧಿಸಿ ಶೈಕ್ಷಣಿಕ ವಿಡಿಯೊ ರಚಿಸುವ ಕುರಿತು ಇ- ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮವು ನಡೆಯಿತು.

ಉದ್ಘಾಟಕರಾದ ಎನ್.ವಿ. ಪೌಲೋಸ್ ಮಾತನಾಡಿ, ‘ತಂತ್ರಜ್ಞಾನದಲ್ಲಿ ಚಾಲ್ತಿಯಲ್ಲಿರುವ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಪಠ್ಯ ಬೋಧನೆ ಡಿಜಿಟಲೀಕರಣ ಆಗುವ ಅವಶ್ಯವಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಣ ರಂಗದಲ್ಲೂ ನವೀನತೆ ಸಾಧಿಸಬೇಕಾದದ್ದು ಮುಖ್ಯ. ಆಗ್ನೆಸ್ ಕಾಲೇಜಿನ ಗ್ರಂಥಾಲಯವು ಹಳೆಯ ಜ್ಞಾನ ಜಗತ್ತನ್ನು ಆಧುನಿಕ ವಲಯಕ್ಕೆ ದಾಟಿಸುವ ಪ್ರಯತ್ನ ಮಾಡುತ್ತಿದೆ’ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ತಿರುವನಂತಪುರದ ಡಿಜಿಟಲ್ ನಾಲೆಡ್ಜ್ ಸೆಂಟರ್‌ನ ಮುಖ್ಯಸ್ಥ ಡಾ. ಗೋಪಕುಮಾರ್ ವಿ. ಅವರು, ‘ಅಂತರ್ಜಾಲ ಎಂಬುದು ಜಗತ್ತನ್ನು ಕಾಣುವ ಕಿಟಕಿ. ಪುಸ್ತಕಗಳಿಗೆ ಮಾತ್ರ ಅವಕಾಶವಿದ್ದ ಶಿಕ್ಷಣ ರಂಗದಲ್ಲಿ ಇಂದು ಅಂತರ್ಜಾಲವೂ ಮುಖ್ಯವೆಂದಾಗಿದೆ. ಪುಸ್ತಕ ಜ್ಞಾನವನ್ನು ತಂತ್ರಜ್ಞಾನದ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯ’ ಎಂದರು.

ಸೇಂಟ್ ಆಗ್ನೆಸ್ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಸಿಸ್ಟರ್ ಡಾ. ವಿನೋರಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ರಿಜಿಸ್ಟ್ರಾರ್ ನಾನ್ಸಿ ವಾಝ್ ಇದ್ದರು. ಗ್ರಂಥಾಲಯ ಮುಖ್ಯಸ್ಥೆ ಡಾ. ವಿಶಾಲ ಬಿ. ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡೇಲಿಯಾ ನಿರೂಪಿಸಿದರು. ರಾಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಪ್ನಾಕುಮಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT