ಉಳ್ಳಾಲ ನಗರಸಭೆ: ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಬದಲಾವಣೆ, ಕಾಂಗ್ರೆಸ್‌ ಹಾದಿ ಸುಗಮ

7

ಉಳ್ಳಾಲ ನಗರಸಭೆ: ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಬದಲಾವಣೆ, ಕಾಂಗ್ರೆಸ್‌ ಹಾದಿ ಸುಗಮ

Published:
Updated:
Deccan Herald

ಉಳ್ಳಾಲ: ಅತಂತ್ರ ಸ್ಥಿತಿಯಲ್ಲಿರುವ ಉಳ್ಳಾಲ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ನಿಚ್ಚಳವಾಗಿದ್ದು, ಮೈತ್ರಿ ಉದ್ಧೇಶದಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇದ್ದ ಮೀಸಲಾತಿ ಬದಲಾವಣೆಯಾಗಿದ್ದು, ಹಿಂದುಳಿದ ವರ್ಗ ಬಿ. ಅಧ್ಯಕ್ಷ ಸ್ಥಾನ ಮೀಸಲಾತಿ ಬಂದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ಮೀಸಲಾತಿ ನಿಗದಿ ಪಡಿಸಿ ಆದೇಶ ಬಂದಿದೆ.

ಉಳ್ಳಾಲ ನಗರ ಸಭೆಯಲ್ಲಿ 31 ಸದಸ್ಯ ಬಲವಿದ್ದು ಅಧಿಕಾರಕ್ಕೇರಲು 16 ಸದಸ್ಯರ ಸಂಖ್ಯೆ ಅಗತ್ಯವಿದೆ. ಅತಂತ್ರ ಸ್ಥಿತಿಯಲ್ಲಿರುವ ನಗರಸಭೆಯಲ್ಲಿ ಕಾಂಗ್ರೆಸ್ 13 ಸದಸ್ಯ ಬಲವನ್ನು ಹೊಂದಿದ್ದು, ಬಿಜೆಪಿ ಮತ್ತು ಎಸ್‍ಡಿಪಿಐ ತಲಾ 6 ಸದಸ ಬಲವನ್ನು ಹೊಂದಿದೆ, ಜೆಡಿಎಸ್ 4 ಮತ್ತು ಪಕ್ಷೇತರರು 2 ಸದಸ್ಯರನ್ನು ಹೊಂದಿದ್ದು , ಕಾಂಗ್ರೆಸ್‍ಗೆ ಅಧಿಕಾರಕ್ಕೇರಲು ಪಕ್ಷೇತರರು ಅಥವಾ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಅನಿವಾರ್ಯವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿಗೆ ಬರುವ ಸದಸ್ಯರಿಗೆ ನೀಡುವ ಸಾಧ್ಯತೆ ಇದೆ. ಆದರೆ ಪ್ರಥಮ ಹಂತದಮೀಸಲಾತಿ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ಮೀಸಲಾತಿ ಬಂದಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮೀಸಲಾತಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಎಲ್ಲಾ ಪಕ್ಷದಲ್ಲಿ ಅಭ್ಯರ್ಥಿಗಳಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಮಾತ್ರ ಇಬ್ಬರು ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿದ್ದರು. ಆದರೆ ಮೈತ್ರಿ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನದಿಂದ ವಂಚಿತರಾಗುವ ಕಾರಣದಿಂದಮೀಸಲಾತಿಯನ್ನು ಅದಲು ಬದಲು ಮಾಡಿದ್ದು, ಹಿಂದುಳಿದ ವರ್ಗ ಬಿ. ಅಧ್ಯಕ್ಷ ಮತ್ತು ಹಿಂದುಳಿದ ವರ್ಗ ಎ. ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾಡಲಾಗಿದೆ.

ಇಬ್ಬರಿಗೆ ಅರ್ಹತೆ: ಉಳ್ಳಾಲ ನಗರಸಭೆಯಲ್ಲಿ ಬಂದಿರುವ ಮೀಸಲಾತಿಯಂತೆ ಸ್ಪರ್ಧೆಗೆ ಇಬ್ಬರು ಸದಸ್ಯರು ಮಾತ್ರ ಅರ್ಹತೆ ಪಡೆಯಲಿದ್ದು ಈ ಹಿಂದೆ ಉಳ್ಳಾಲ ಪುರಸಭೆಯಲ್ಲಿ ಅಧ್ಯಕ್ಷರಾಗಿದ್ದ ಬಾಝಿಲ್ ಡಿ.ಸೋಜ , ಹಾಗೂ ಸದಸ್ಯೆ ವೀಣಾ ಡಿ.ಸೋಜ ಅವಕಾಶ ಪಡೆಯಲಿದ್ದಾರೆ. ಉಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ಪಕ್ಷಗಳಲ್ಲಿ ಅಭ್ಯರ್ಥಿಗಳಿಲ್ಲ. ಇನ್ನೊಂದೆಡೆ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ದಂಡೇ ಇದ್ದು, ಕಾಂಗ್ರೆಸ್‍ನಲ್ಲಿ 9 ಸದಸ್ಯರಿದ್ದರೆ, ಜೆಡಿಎಸ್‍ನಲ್ಲಿ 4 ಸದಸ್ಯರು,  ಪಕ್ಷೇತರ ಇಬ್ಬರು ಸದಸ್ಯರು ಅರ್ಹತೆಯನ್ನು ಪಡೆಯಲಿದ್ದಾರೆ. ಇದೀಗ ಮೈತ್ರಿಗೆ ಯಾರು ಮುಂದೆ ಬರುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದ್ದು ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಎನ್ನುವುದು ಮೈತ್ರಿಯನ್ನು ಆಧರಿಸಿ ಇದೆ.

ಎಸ್‍ಡಿಪಿಐ ಮತ್ತು ಬಿಜೆಪಿಯಿಂದ ಸಮಾನ ದೂರ : ಕಾಂಗ್ರೆಸ್‍ನ ಬಳಿಕ ಉಳ್ಳಾಲದಲ್ಲಿ ಆತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವುದು ಎಸ್‍ಡಿಪಿಐ ಮತ್ತು ಬಿಜೆಪಿ ಪಕ್ಷ. ಎರಡೂ ಪಕ್ಷಗಳು ತಲಾ 6 ಸದಸ್ಯರ ಬಲವನ್ನು ಹೊಂದಿದ್ದು, ಕಾಂಗ್ರೆಸ್ ಈ ಎರಡೂ ಪಕ್ಷದೊಂದಿಗೆ ಸಮಾನ ಅಂತರನ್ನು ಕಾಯ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !