ಕಾಂಗ್ರೆಸ್‌ಗೆ ಹಾಕಿದ ಮತ ಬಿಜೆಪಿಗೆ: ಮಂಗಳೂರಿನ ಕಲ್ಲಾಪುವಿನಲ್ಲಿ ಗೊಂದಲ!

ಸೋಮವಾರ, ಮೇ 27, 2019
33 °C
ಅಣಕು ಮತದಾನದ ಸಂದರ್ಭದಲ್ಲಿ ವ್ಯತ್ಯಾಸ

ಕಾಂಗ್ರೆಸ್‌ಗೆ ಹಾಕಿದ ಮತ ಬಿಜೆಪಿಗೆ: ಮಂಗಳೂರಿನ ಕಲ್ಲಾಪುವಿನಲ್ಲಿ ಗೊಂದಲ!

Published:
Updated:

ಮಂಗಳೂರು: ಅಣಕು ಮತದಾನದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಹಾಕಿದ್ದ ಮತಗಳು ಬಿಜೆಪಿ ವರ್ಗಾವಣೆಗೊಂಡಿವೆ ಎಂಬ ಆರೋಪ ವ್ಯಕ್ತವಾಗಿದ್ದರಿಂದ ಮಂಗಳೂರು ವಿಧಾನಸಭಾ ಕ್ಷೇತ್ರದ ಕಲ್ಲಾಪು ಮತಗಟ್ಟೆಯಲ್ಲಿ ಬೆಳಿಗ್ಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಏಜೆಂಟರ ಸಮ್ಮುಖದಲ್ಲಿ ಬೆಳಿಗ್ಗೆ 6 ಗಂಟೆಗೆ ಅಣಕು ಮತದಾನ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಚಲಾಯಿಸಿದ್ದ 42 ಮತಗಳು ಬಿಜೆಪಿಗೆ ವರ್ಗಾವಣೆಯಾಗಿವೆ ಎಂದು ಕಾಂಗ್ರೆಸ್‌ ಏಜೆಂಟರು, ಚುನಾವಣಾ ಅಧಿಕಾರಿಗಳ ಬಳಿ ದೂರಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದು, ಇವಿಎಂನಲ್ಲಿ ಯಾವುದೇ ತೊಂದರೆ ಇಲ್ಲ. ಅದಾಗ್ಯೂ ಇವಿಎಂ ಬದಲಿಸಲಾಗುವುದು ಎಂದು ಹೇಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪರ್ಯಾಯ ಇವಿಎಂ ಮೂಲಕ ಮತದಾನಕ್ಕೆ ಅವಕಾಶ ಮಾಡಲಾಗಿದೆ. ನಂತರ ಮತದಾನ ಸುಗಮವಾಗಿ ನಡೆದಿದೆ.

ಅಣಕು ಮತದಾನದ ಸಂದರ್ಭದಲ್ಲಿ ನಡೆದ ಘಟನೆಗಳ ವಿಡಿಯೊ ಚಿತ್ರೀಕರಣ ಮಾಡಲಾಗಿದ್ದು, ಇವಿಎಂ ಸರಿಯಾಗಿಲ್ಲ ಎನ್ನುವ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಜಿಲ್ಲಾಧಿಕಾರಿ ಸೆಂಥಿಲ್‌ ಯಾವುದೇ ತೊಂದರೆ ಇಲ್ಲ. ಮತದಾನ ಸುಗಮವಾಗಿ ನಡೆದಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 7

  Amused
 • 2

  Sad
 • 1

  Frustrated
 • 30

  Angry

Comments:

0 comments

Write the first review for this !