ಶನಿವಾರ, ಮೇ 15, 2021
24 °C

ಮನಗೆದ್ದ ಹಾಲಕ್ಕಿಗರ ತಾರ್ಲೆ ನೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಂತೂರು ತಾರೆತೋಟದ ‘ಮೂಲತ್ವ’ ಆಧ್ಯಾತ್ಮಿಕ ತಂಡದ ಪ್ರಕಾಶ್ ಅವರು ಹಾಲಕ್ಕಿ ಬುಡಕಟ್ಟು ಸಮುದಾಯದ ನಾಯಕಿ, ಜಾನಪದ ಹಾಡುಗಾರ್ತಿಸುಕ್ರಿ ಬೊಮ್ಮ ಗೌಡ ಮತ್ತು ಅವರ ತಂಡದ ಪದ್ಮಾವತಿ ಗೌಡ, ಲಲಿತಾ ಗೌಡ, ಕುಚ್ಲಿ ಗೌಡ ಅವರನ್ನು ಗೌರವಿಸಿದರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನಿಂದ ಬಂದಿದ್ದ ಸುಕ್ರಿ ಗೌಡ ತಂಡದವರು ಜನಪದ ಹಾಡು, ಹಾಲಕ್ಕಿ ತಾರ್ಲೆ ನೃತ್ಯ ಪ್ರದರ್ಶಿಸಿದರು. ಲೋಕ ಕಲ್ಯಾಣಕ್ಕಾಗಿ ಮತ್ತು ಸದ್ಯದ ಸಾಂಕ್ರಾಮಿಕ, ಪ್ರಾಕೃತಿಕ ದುರಂತಗಳು ಕೊನೆಯಾಗಿ ಶಾಂತಿ, ನೆಮ್ಮದಿ, ಆರೋಗ್ಯ ಲಭಿಸಲೆಂದು ಪ್ರಾರ್ಥಿಸಿ, ಭಜನೆ, ವೇದ, ಪ್ರಾರ್ಥನೆ ನಡೆಸಲಾಯಿತು. ಹಾಲಕ್ಕಿಗರ ತಾರ್ಲೆ ನೃತ್ಯ ಮಂಗಳೂರಿಗರ ಮನಸೆಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು