ಗುರುವಾರ , ಸೆಪ್ಟೆಂಬರ್ 19, 2019
21 °C

ಹಳೆನೇರೆಂಕಿ: ಇಲಿಜ್ವರದಿಂದ ಯುವಕ ಸಾವು

Published:
Updated:
Prajavani

ಕಡಬ(ಉಪ್ಪಿನಂಗಡಿ): ಹಳೆನೇರೆಂಕಿ ಗ್ರಾಮದ ಕುಕ್ಕೆಜಾಲು ನಿವಾಸಿ ಕುಂಞ ಮುಗೇರ ಎಂಬವರ ಪುತ್ರ ಅನೀಶ್ ಕೆ.(28) ಎಂಬವರು ಶಂಕಿತ ಇಲಿಜ್ವರದಿಂದ ಮೃತಪಟ್ಟಿದ್ದಾರೆ.

‌‘ಅನೀಶ್ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ಮಲ್ಲಿಕಟ್ಟೆಯಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧಿಸಿದ ಕರಕುಶಲ ವಸ್ತುಗಳ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

ಗುರುವಾರ ಇವರಿಗೆ  ಜ್ವರ ಕಾಣಿಸಿಕೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಿಸದೆ ಅವರು ಶನಿವಾರ ಮೃತಪಟ್ಟಿದ್ದಾರೆ. ಅನೀಶ್ ಇಲಿಜ್ವರ ಉಲ್ಬಣಗೊಂಡು ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ’ ಎಂದು ಅನೀಶ್ ಸಹೋದರ ಕೃಷ್ಣ ತಿಳಿಸಿದ್ದಾರೆ.

Post Comments (+)