ಆರ್ಥಿಕ ನೆರವಿಗೆ ಮನವಿ

7
ಮಗುವಿಗೆ ಮಿದುಳು ಸಂಬಂಧಿ ರೋಗ

ಆರ್ಥಿಕ ನೆರವಿಗೆ ಮನವಿ

Published:
Updated:
Deccan Herald

ಬದಿಯಡ್ಕ: ನೀರ್ಚಾಲಿನ ಕಿಳಿಂಗಾರು  ಎಂಬಲ್ಲಿನ ಈಶ್ವರ -ಶಾಂತಕುಮಾರಿ ದಂಪತಿಯ ಒಂದೂವರೆ ವರ್ಷದ ಹೆಣ್ಣುಮಗು ಸಾನ್ನಿಧ್ಯ  ಒಂದೂವರೆ ತಿಂಗಳಿನಿಂದ ಮಿದುಳಿಗೆ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ದಾನಿಗಳು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

 ಈಶ್ವರ ಕಡಿಮೆ ಆದಾಯದ ಕೆಲಸದಲ್ಲಿದ್ದು, ಇತ್ತೀಚೆಗೆ ಮಗಳ ಆರೋಗ್ಯದ ಸಮಸ್ಯೆಯಿಂದ ಅದಕ್ಕೂ ಕಷ್ಟವಾಗಿದೆ. ಕುಟುಂಬದ ಆದಾಯವೂ ಕುಸಿದಿದೆ. ಮಗಳ ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ. ಪ್ರತೀದಿನ ನೀಡಲಾಗುವ 3 ಇಂಜೆಕ್ಷನ್ನಿಗೆ ರೂಪಾಯಿ 8 ಸಾವಿರಕ್ಕೂ ಮಿಕ್ಕಿದ ವೆಚ್ಚವಾಗುತ್ತಿದೆ. ಇತರ ಔಷಧಿಯ ಖರ್ಚುಗಳೂ ಸೇರಿ ಇನ್ನೂ ₹1 ಲಕ್ಷ ಕ್ಕೂ ಹೆಚ್ಚು ವೆಚ್ಚ ತಗುಲಲಿದೆ.

ಇನ್ನೂ ಕೆಲವು ಸಮಯದ ಚಿಕಿತ್ಸೆ ಅಗತ್ಯವಿರುವುದಾಗಿ ವೈದ್ಯರು ತಿಳಿಸಿರುವುದರಿಂದ ಹಣ ಸಮಸ್ಯೆಯಾಗಿದೆ.
ಕುಟುಂಬದ ನೋವಿಗೆ ಸ್ಪಂದಿಸಿ ದಾನಿಗಳು ಉದಾರ ನೆರವು ನೀಡಿ ಪುಟ್ಟ ಮಗುವಿನ ಪ್ರಾಣವನ್ನು ಉಳಿಸುವಲ್ಲಿ ನೆರವಾಗಲು ನೀರ್ಚಾಲಿನ ನಿವೇದಿತಾ ಸೇವಾ ಮಿಶನ್ ಮನವಿ ಮಾಡಿದೆ.  ಮಿಶನ್ ಆರ್ಥಿಕ ನಿಧಿ ಸಂಗ್ರಹಕ್ಕೆ ಅಭಿಯಾನವನ್ನು ಹಮ್ಮಿಕೊಂಡಿದೆ.

ಈಶ್ವರ ಅವರ ಸಂಪರ್ಕ ದೂರವಾಣಿ ಸಂಖ್ಯೆ : 09946278842. ದಾನಿಗಳು ಈಶ್ವರ, ಸೌತ್ ಇಂಡಿಯನ್ ಬ್ಯಾಂಕ್, ಸೀತಾಂಗೋಳಿ ಶಾಖೆ, ಖಾತೆ ನಂ. 0946053000000991 ಐಎಫ್ಎಸ್ಸಿ: ಎಸ್ಐಬಿಎಲ್0000946 ಖಾತೆಗೆ ಧನಸಹಾಯ ನೀಡಲು ವಿನಂತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !